ಸಿಂದಗಿ ಆರೋಗ್ಯ ಸಿಬ್ಬಂದಿ ಮೇಲಿನ ಕೇಸ್ ಸುಖಾಂತ್ಯ

808

ಪ್ರಜಾಸ್ತ್ರ ಸುದ್ದಿ

ಸಿಂದಗಿ: ಕರೋನಾ ಸೋಂಕಿತರ ಪ್ರಾಥಮಿಕ ಸಂಪರ್ಕದಲ್ಲಿ ಬಂದವರು ಹೋಂ ಕ್ವಾರಂಟೈನ್ ಆಗದೆ, ಹೊರಗಡೆ ತಿರುಗಾಡ್ತಿದ್ದಾರೆಂದು ತಾಲೂಕಿನ 27 ಜನರ ಮೇಲೆ ಸಿಂದಗಿಯಲ್ಲಿ ಎಫ್ಐಆರ್ ದಾಖಲಿಸಲಾಗಿದೆ. ನಿಯಮಾವಳಿ ಉಲ್ಲಂಘನೆ ಮೇಲೆ ತಾಲೂಕಿನ 27 ಮಂದಿ ಮೇಲೆ ಕೇಸ್ ದಾಖಲಿಸಲಾಗಿದೆ.

ಹೀಗೆ ದಾಖಲಿಸಲಾದ ಪ್ರಕರಣದಲ್ಲಿ 6 ಜನ ಆರೋಗ್ಯ ಇಲಾಖೆ ಸಿಬ್ಬಂದಿ ಇದ್ದು, ಇದು ಆಕ್ರೋಶಕ್ಕೆ ಕಾರಣವಾಗಿತ್ತು. ಸೋಂಕಿತರ ಪ್ರಾಥಮಿಕ ಸಂಪರ್ಕದಲ್ಲಿದ್ರೂ, ಕೆಲ ದಿನ ಕ್ವಾರಂಟೈನ್ ಆಗಿದ್ದೇವೆ. ಬಳಿಕ ಮೇಲಾಧಿಕಾರಿಗಳು ಹೇಳಿರುವ ಕಾರಣಕ್ಕೆ, ಕರ್ತವ್ಯ ಹಾಜರಾಗಿದ್ದೇವೆ. ಹೀಗಾಗಿ ಹೊರಗೆ ಬರುವುದು ಅನಿವಾರ್ಯವಾಗಿತ್ತು. ಆದ್ರೆ, ನಮ್ಮ ಮೇಲೆ ಎಫ್ಐಆರ್ ದಾಖಲಿಸಿದ್ರೆ ಹೇಗೆ ಎಂದು ತಹಶೀಲ್ದಾರ್ ಸಂಜೀವಕುಮಾರ ದಾಸರ ಅವರ ಎದುರು ಅಸಮಾಧಾನ ಹೊರ ಹಾಕಿದ್ರು.

ಈ ವೇಳೆ ಮಾತ್ನಾಡಿದ ತಹಶೀಲ್ದಾರ್ ಅವರು, ಉದ್ದೇಶಪೂರ್ವಕವಾಗಿ ಮಾಡಿರುವುದಲ್ಲ. ಜಿಲ್ಲೆಯಿಂದ ಬಂದ ಲಿಸ್ಟ್ ನಲ್ಲಿ ಕೇವಲ ಹೆಸರು, ಊರು, ಫೋನ್ ನಂಬರ್ ಇರುವುದ್ರಿಂದ ಹೀಗಾಗಿದೆ. ಜಿಲ್ಲೆಯಿಂದ ಬರುವ ಲಿಸ್ಟ್ ನಲ್ಲಿ ಯಾರು ಯಾವ ಇಲಾಖೆಯವರು ಎಂದು ಗೊತ್ತಾಗುವುದಿಲ್ಲ. ಹೀಗಾಗಿ ಆಗಿರುತ್ತೆ. ಇದೊಂದು ಪಿಟಿ ಕೇಸ್. ನಿಮ್ಮ ಮೇಲಿನ ಪ್ರಕರಣವನ್ನ ತೆಗೆದು ಹಾಕಲು ಸಿಪಿಐ ಅವರಿಗೆ ಹೇಳುತ್ತೇನೆ ಎಂದು, ಸ್ಥಳದಲ್ಲಿಯೇ ಇದ್ದ ಸಿಪಿಐ ಸತೀಶ ಕಂಬಾಳೆ ಅವರಿಗೆ ತಿಳಿಸಿದ್ರು.

ಈ ರೀತಿ ಮತ್ತೆ ಆಗದಂತೆ ನೋಡಿಕೊಳ್ಳಲಾಗುತ್ತೆ. ನಾವೆಲ್ಲ ಕರೋನಾ ವಾರಿಯರ್ಸ್. ನಿಮ್ಮ ಜೊತೆ ನಾವಿದ್ದೇವೆ. ಇದ್ರಿಂದ ನಿಮ್ಗೆ ಯಾವುದೇ ತೊಂದರೆಯಾಗುವುದಿಲ್ಲ. ಈಗ್ಲೇ ಪ್ರಕರಣ ತೆಗೆದು ಹಾಕಲಾಗುತ್ತೆ ಎಂದು ಹೇಳಿದ್ಮೇಲೆ ಎಲ್ಲರೂ ಒಪ್ಪಿಕೊಂಡರು. ಈ ವೇಳೆ ತಾಲೂಕು ಆರೋಗ್ಯಾಧಿಕಾರಿ ಇಂಗಳೆ, ಹಿರಿಯ ಫಾರ್ಮಸಿ ಅಧಿಕಾರಿ ಶಂಕರ ಮಳ್ಳಿ, ಪ್ರಕಾಶ ಬಾಗಲಕೋಟ, ಗಂಗಾಧರ ಚಬೂಕಸವಾರ, ಸುನೀಲ ಅಡಿಗಲ, ಸುರೇಶ ಬಬಲೇಶ್ವರ, ಅಶೋಕ ತೆಲ್ಲೂರ, ರಾಜು ನರಗೋದಿ, ಸಿದ್ಧನಗೌಡ ಪಾಟೀಲ, ಚೇತನ ಲೋಣಿ, ಶ್ರೀನಾಥ ಹಿಟ್ಟಿ, ವೀರೇಂದ್ರ ಪನಾಡೆ, ಚಂದ್ರಶೇಖರ ಕಾಳೆ ಸೇರಿದಂತೆ ಅನೇಕರು ಹಾಜರಿದ್ರು.




Leave a Reply

Your email address will not be published. Required fields are marked *

error: Content is protected !!