ಶಾಪಿಂಗ್ ಮಾಲ್ ನಲ್ಲಿ ಬೆಂಕಿ ಅನಾಹುತ

227

ಪ್ರಜಾಸ್ತ್ರ ಸುದ್ದಿ

ಬೆಂಗಳೂರು: ನಗರದ ಬನ್ನೇರುಘಟ್ಟದ ರಸ್ತೆಯ ಅರಕೆರೆ ಗೇಟ್ ಹತ್ತಿರ ಇರುವ ಮಾಲ್ ವೊಂದರಲ್ಲಿ ಶನಿವಾರ ನಸುಕಿನ ಜಾವ ಬೆಂಕಿ ಕಾಣಿಸಿಕೊಂಡಿದೆ. ಸುದ್ದಿ ತಿಳಿದು ಸ್ಥಳಕ್ಕೆ ಬಂದ 6 ಅಗ್ನಿಶಾಮಕ ತಂಡ ಎರಡು ಗಂಟೆಗಳ ಕಾರ್ಯಾಚರಣೆ ನಡೆಸಿ ಬೆಂಕಿ ನಂದಿಸಿದ್ದಾರೆ.

ಮಾಲ್ ನ ಗ್ರೌಂಡ್ ಫ್ಲೋರ್ ನಲ್ಲಿರುವ ಸೂಪರ್ ಮಾರ್ಕೆಟ್ ಸ್ಟೋರೇಜ್ ನಲ್ಲಿ ಬೆಂಕಿ ಕಾಣಿಸಿಕೊಂಡಿದೆ ಎಂದು ಹೇಳಲಾಗುತ್ತಿದೆ. ಯಾವುದೇ ಪ್ರಾಣ ಹಾನಿ ಸಂಭವಿಸಿಲ್ಲ. ಬೆಂಕಿ ಅನಾಹುತಕ್ಕೆ ನಿಖರ ಕಾರಣ ಏನು ಅನ್ನೋದರ ತನಿಖೆ ನಡೆಯುತ್ತಿದೆ.




Leave a Reply

Your email address will not be published. Required fields are marked *

error: Content is protected !!