ಐವರು ನಿರ್ದೇಶನದ ಚಿತ್ರ.. ಜಯತೀರ್ಥ ಆ್ಯಕ್ಷನ್ ಕಟ್ ಶುರು

256

ಪ್ರಜಾಸ್ತ್ರ ಸಿನಿಮಾ ಡೆಸ್ಕ್

ಸ್ಯಾಂಡಲ್ ವುಡ್ ನಲ್ಲಿ ಹಿಟ್ ಚಿತ್ರಗಳನ್ನ ನೀಡಿರುವ ಐವರು ನಿರ್ದೇಶಕರು ಜೊತೆಗೂಡಿ ಸಿನಿಮಾ ಮಾಡ್ತಿರುವುದು ಎಲ್ಲರಿಗೂ ಗೊತ್ತಿರುವ ವಿಷಯ. ಆದ್ದರಿಂದ ಚಿತ್ರವನ್ನ ಯೋಗರಾಜ ಭಟ್, ಜಯತೀರ್ಥ, ಶಶಾಂಕ, ಕೆ.ಎಂ ಚೈತನ್ಯ ಹಾಗೂ ಪವನಕುಮಾರ ಜೊತೆಯಾಗಿ ಆ್ಯಕ್ಷನ್ ಕಟ್ ಹೇಳ್ತಿದ್ದಾರೆ.

ಈಗಾಗ್ಲೇ ಇಬ್ಬರು ನಿರ್ದೇಶಕರು ಆದ್ದರಿಂದ ಚಿತ್ರದ ತಮ್ಮ ಭಾಗದ ಶೂಟಿಂಗ್ ಮುಗಿಸಿದ್ದಾರೆ. ಇದೀಗ ನಿರ್ದೇಶಕ ಜಯತೀರ್ಥ ಅವರು ತಮ್ಮ ಭಾಗದ ಶೂಟಿಂಗ್ ಶುರು ಮಾಡಿದ್ದಾರೆ. ನಟ ರಿಷಿ, ನಟಿ ರಂಜಿನಿ ರಾಘವನ್ ಈ ಚಿತ್ರದಲ್ಲಿ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.

ಇನ್ನು ಈ ಚಿತ್ರವನ್ನ ನಿರ್ದೇಶಕ, ನಿರ್ಮಾಪಕ ಗುರು ದೇಶಪಾಂಡೆ ಅವರ ಜಿ ಸಿನಿಮಾಸ್ ಬ್ಯಾನರ್ ಅಡಿಯಲ್ಲಿ ನಿರ್ಮಾಣವಾಗ್ತಿದೆ. ಫೆಬ್ರವರಿ ಅಥವ ಮಾರ್ಚ್ ನಲ್ಲಿ ಸಿನಿಮಾ ರಿಲೀಸ್ ಆಗಲಿದೆ ಎನ್ನಲಾಗ್ತಿದ್ದು, ಅಧಿಕೃತ ಮಾಹಿತಿ ಹೊರ ಬೀಳಬೇಕಿದೆ.




Leave a Reply

Your email address will not be published. Required fields are marked *

error: Content is protected !!