ಚಾಹಲ್ ವೈವಾಹಿಕ ಇನ್ನಿಂಗ್ಸ್ ಶುರು

286

ಪ್ರಜಾಸ್ತ್ರ ಕ್ರೀಡಾ ಸುದ್ದಿ

ಗುರುಗ್ರಾಮ್: ಇಂಡಿಯನ್ ಕ್ರಿಕೆಟ್ ಟೀಂ ಸ್ಪೀನ್ ಬೌಲರ್ ಯಜುವೇಂದ್ರ ಚಹಾಲ್ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ. ವೈದ್ಯ ಹಾಗೂ ಕೊರಿಯೋಗ್ರಾಫರ್ ಆಗಿರುವ ಡಾ.ಧನಶ್ರೀ ಜೊತೆ ಚಾಹಲ್ ಕಲ್ಯಾಣೋತ್ಸವ ನಡೆದಿದೆ.

ಟ್ವೀಟರ್ ಮೂಲಕ ಚಹಾಲ್ ತಮ್ಮ ಮದುವೆ ಬಗ್ಗೆ ಹಂಚಿಕೊಂಡಿದ್ದಾರೆ. 22-12-2020ಕ್ಕೆ ಸಂಸಾರಿಕ ಬದುಕಿಗೆ ಕಾಲಿಟ್ಟಿದ್ದೇನೆ ಎಂದು ಹೇಳಿದ್ದು, ಕೆಲವೊಂದಿಷ್ಟು ಫೋಟೋಗಳನ್ನ ಹಂಚಿಕೊಂಡಿದ್ದಾರೆ. ಕರ್ಮಾ ಲೇಕ್ ರೆಸಾರ್ಟ್ ನಲ್ಲಿ ಮದುವೆ ನಡೆದಿದೆ.

ಇನ್ನು ಚಹಾಲ್ ಹಾಗೂ ಡಾ.ಧನಶ್ರೀ ಆಗಸ್ಟ್ ನಲ್ಲಿ ನಿಶ್ಚಿತಾರ್ಥ ಮಾಡಿಕೊಂಡಿಕೊಂಡಿದ್ರು. ಬಳಿಕ ಐಪಿಎಲ್ ಶುರುವಾಯ್ತು. ಹೀಗಾಗಿ ಡಿಸೆಂಬರ್ 22ರಂದು ಈ ಜೋಡಿಯ ಮದುವೆ ನಡೆದಿದೆ. ಇಂಡಿಯನ್ ಕ್ರಿಕೆಟ್ ಟೀಂನ ಆಟಗಾರರು, ಮಾಜಿ ಆಟಗಾರರು ಸೇರಿದಂತೆ ಅಭಿಮಾನಿಗಳು ಶುಭ ಕೋರಿದ್ದಾರೆ.




Leave a Reply

Your email address will not be published. Required fields are marked *

error: Content is protected !!