ಲೈಂಗಿಕ ದೌರ್ಜನ್ಯ, ಮಾಜಿ ಡಿಜಿಪಿಗೆ ಜೈಲು ಶಿಕ್ಷೆ

159

ಪ್ರಜಾಸ್ತ್ರ ಸುದ್ದಿ

ಚೆನ್ನೈ: ತಮಿಳುನಾಡಿನ ಮಾಜಿ ಪೊಲೀಸ್ ಮಹಾನಿರ್ದೇಶಕರೊಬ್ಬರು ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಅಪರಾಧಿ ಎಂದು ಸಾಬೀತು ಆಗಿದೆ. ಹೀಗಾಗಿ ಕೋರ್ಟ್ ಅವರಿಗೆ 3 ವರ್ಷಗಳ ಕಠಿಣ ಕಾರಾಗೃಹ ಶಿಕ್ಷೆ ವಿಧಿಸಿದೆ.

ಮಹಿಳಾ ಐಪಿಎಸ್ ಅಧಿಕಾರಿ ಮೇಲೆ ಲೈಂಗಿಕ ದೌರ್ಜನ್ಯ ಸಂಬಂಧ ಮಾಜಿ ಡಿಜಿಪಿ ರಾಜೇಶ್ ದಾಸ್ ವಿರುದ್ಧ 2021, ಫೆಬ್ರವರಿಯಲ್ಲಿ ದೂರು ದಾಖಲಾಗಿತ್ತು. ಹೀಗಾಗಿ ಅಂದಿನ ಎಐಡಿಎಂಕೆ ಸರ್ಕಾರ ಅವರು ಕೆಲಸದಿಂದ ಅಮಾನತು ಮಾಡಿತ್ತು. ತನಿಖೆ 6 ಸದಸ್ಯರ ಸಮಿತಿ ರಚಿಸಲಾಗಿತ್ತು. 68 ಮಂದಿಯ ಹೇಳಿಕೆಯನ್ನು ಪಡೆಯಲಾಗಿದೆ.

ಇದೀಗ ವಿಲ್ಲುಪುರಂ ಕೋರ್ಟ್ ಅಪರಾಧಿ ಎಂದು ಪರಿಗಣಿಸಿ 3 ವರ್ಷಗಳ ಜೈಲು ಶಿಕ್ಷೆ ವಿಧಿಸಿದೆ. ಈ ತೀರ್ಪು ಸಂಬಂಧ ಮೇಲ್ಮನವಿ ಸಲ್ಲಿಸಲು ಅವಕಾಶ ನೀಡಲಾಗಿದೆ.




Leave a Reply

Your email address will not be published. Required fields are marked *

error: Content is protected !!