ಎದೆ ಮೇಲೆ ಅಪ್ಪು ಟ್ಯಾಟೂ ಹಾಕಿಸಿಕೊಂಡ ಯುವತಿ

188

ಪ್ರಜಾಸ್ತ್ರ ಸಿನಿಮಾ ಡೆಸ್ಕ್

ಚಂದನವನದ ಪವರ್ ಸ್ಟಾರ್, ಕರ್ನಾಟಕ ರತ್ನ ಡಾ.ಪುನೀತ್ ರಾಜಕುಮಾರ್ ಅವರು ದೈಹಿಕವಾಗಿ ಎಲ್ಲರಿಂದ ದೂರವಾಗಿ ಎರಡೂ ವರ್ಷ ಆಗುತ್ತಾ ಬರುತ್ತಿದೆ. ಆದರೆ, ಅಭಿಮಾನಿಗಳ ಅಭಿಮಾನ ಮಾತ್ರ ಎಂದಿಗೂ ಕಡಿಮೆಯಾಗಲ್ಲ ಅನ್ನೋ ಘಟನೆಗಳು ಆಗಾಗ ನಡೆಯುತ್ತಿವೆ.

ಇದೀಗ ಯುವತಿಯೊಬ್ಬಳು ಎದೆಯ ಮೇಲೆ ಪುನೀತ್ ರಾಜಕುಮಾರ್ ಟ್ಯಾಟೂ ಹಾಕಿಸಿಕೊಂಡಿರುವುದು ವೈರಲ್ ಆಗಿದೆ. ಇದನ್ನು ನೋಡಿದ ಫ್ಯಾನ್ಸ್ ಅಪ್ಪು ಅಮರ ಎನ್ನುತ್ತಿದ್ದಾರೆ. ಅವರು ಮಾಡಿದ ಸಾಧನೆ, ಪರೋಪಕಾರಿ ಕೆಲಸವನ್ನು ತಾವು ಜೀವನದಲ್ಲಿ ಮಾಡಬೇಕು ಅನ್ನೋ ಸ್ಪೂರ್ತಿಯಿಂದ ನಿತ್ಯ ಒಂದಲ್ಲ ಒಂದು ಕಡೆ ಪುನೀತ್ ಹೆಸರಿನಲ್ಲಿ ಕೆಲಸ ನಡೆಯುತ್ತಿರುವುದೇ ಅವರ ಅಭಿಮಾನಕ್ಕೆ ಸಾಕ್ಷಿ.




Leave a Reply

Your email address will not be published. Required fields are marked *

error: Content is protected !!