10 ಲಕ್ಷ ಮೌಲ್ಯದ ಗಾಂಜಾ ಗಿಡಗಳ ಜಪ್ತಿ

291

ಪ್ರಜಾಸ್ತ್ರ ಸುದ್ದಿ

ವಿಜಯಪುರ: ಕಬ್ಬಿನ ಜಮೀನಿನಲ್ಲಿ ಅಕ್ರಮವಾಗಿ ಬೆಳೆದಿದ್ದ ಸುಮಾರು ಹತ್ತು ಲಕ್ಷ ಮೌಲ್ಯದ ಗಾಂಜಾ ಗಿಡಗಳನ್ನು ಅಬಕಾರಿ ಪೊಲೀಸರು ಜಪ್ತಿ ಮಾಡಿದ್ದಾರೆ. ಇಂಡಿ ತಾಲೂಕಿನ ಮಿರಗಿ ಗ್ರಾಮದಲ್ಲಿ ಕಬ್ಬಿನ ಜಮೀನೊಂದರಲ್ಲಿ ಬೆಳೆದಿದ್ದ 62 ಗಾಂಜಾ ಗಿಡಗಳನ್ನು ಜಪ್ತಿ ಮಾಡಲಾಗಿದೆ.

62 ಗಾಂಜಾ ಗಿಡಗಳು 100 ಕೆಜೆ ಆಗಿದ್ದು ಸುಮಾರು 10 ಲಕ್ಷ ರೂಪಾಯಿ ಮೌಲ್ಯದ್ದಾಗಿವೆ ಎಂದು ವಿಜಯಪುರ ಅಬಕಾರಿ ಉಪ ಅಧೀಕ್ಷ ಶಾಂತೇಶ್ ಕಮತರ ಹೇಳಿದ್ದಾರೆ. ಇನ್ನು ಆರೋಪಿ ಮಾದೇವ ಬಸ್ಕಿ ಎಂಬಾತನನ್ನು ಬಂಧನ ಮಾಡಲಾಗಿದೆ ಎಂದು ತಿಳಿಸಿದ್ದಾರೆ.




Leave a Reply

Your email address will not be published. Required fields are marked *

error: Content is protected !!