ಗರೀಬ್ ಕಲ್ಯಾಣ ಯೋಜನೆ: ದಕ್ಷಿಣ ಭಾರತದ ಕಾರ್ಮಿಕರಿಗಿಲ್ಲ ಕೆಲಸ

353

ಪ್ರಜಾಸ್ತ್ರ ಸುದ್ದಿ

ನವದೆಹಲಿ: ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಪತ್ರಿಕಾಗೋಷ್ಠಿ ನಡೆಸುವ ಮೂಲಕ, ಗರೀಬ್ ಕಲ್ಯಾಣ ರೋಜರ್ ಅಭಿಯನ್ ದ ಮಾಹಿತಿ ನೀಡಿದ್ದಾರೆ. 50 ಸಾವಿರ ಕೋಟಿಯ ಲೋಕೋಪಯೋಗಿ ಯೋಜನೆ, ಊರುಗಳಿಗೆ ತೆರಳಿರುವ ಕಾರ್ಮಿಕರ ಉದ್ಯೋಗಕ್ಕೆ ಅವಕಾಶವಾಗಲಿದೆ ಎಂದಿದ್ದಾರೆ.

ಕರೋನಾ ಲಾಕ್ ಡೌನ್ ನಿಂದಾಗಿ ವಲಸೆ ಕಾರ್ಮಿಕರಿಗೆ ಉದ್ಯೋಗ ನೀಡುವ ಉದ್ದೇಶದಿಂದ, ಜೂನ್ 20ರಂದು ಗರೀಬ್ ಕಲ್ಯಾಣ್ ರೋಜರ್ ಯೋಜನೆ ಪ್ರಾರಂಭಿಸುವುದಾಗಿ ಪ್ರಧಾನಿ ಘೋಷಿಸಿದ್ರು. ಇದು ರಾಜ್ಯಗಳಿಗೆ ಮರಳಿದ ಕಾರ್ಮಿಕರ ಉದ್ಯೋಗಕ್ಕೆ ಅನುಕೂಲವಾಗಲಿದೆ. ರಾಜ್ಯ ಸರ್ಕಾರಗಳೊಂದಿಗೆ ಸಂಪರ್ಕದಲ್ಲಿದ್ದೇವೆ. ಈ ಅಭಿಯಾನಕ್ಕೆ ಬಿಹಾರ, ಉತ್ತರ ಪ್ರದೇಶ, ಮಧ್ಯಪ್ರದೇಶ, ಜಾರ್ಖಂಡ್, ಒಡಿಶಾ ಹಾಗೂ ರಾಜಸ್ಥಾನದ 116 ಜಿಲ್ಲೆಗಳನ್ನ ಆಯ್ಕೆ ಮಾಡಲಾಗಿದೆ ಎಂದಿದ್ದಾರೆ.

ಈ ಕಾರ್ಯಕ್ರಮವು 25 ಸಾವಿರ ವಲಸೆ ಕಾರ್ಮಿಕರು ಮರಳಿದ ಜಿಲ್ಲೆಗಳಿಗೆ ಅನ್ವಯಿಸಲಿದೆ. ಇದರ ಆಧಾರದ ಮೇಲೆ 116 ಜಿಲ್ಲೆಗಳ ಆಯ್ಕೆ ಮಾಡಲಾಗಿದೆ ಹಾಗೂ ಮೊದಲ ಕಂತಿನಲ್ಲಿ 4 ತಿಂಗಳವರೆಗೆ ಉದ್ಯೋಗ ನೀಡಲಾಗುವುದು ಎಂದಿದ್ದಾರೆ. ಬಿಹಾರದ 32, ಉತ್ತರ ಪ್ರದೇಶದ 31, ಮಧ್ಯಪ್ರದೇಶದ 24, ರಾಜಸ್ಥಾನದ 22, ಒಡಿಶಾದ 4, ಜರ್ಖಾಂಡನ 3 ಜಿಲ್ಲೆಗಳಿಗೆ ಇದು ಅನ್ವಯಿಸಲಿದೆ.

ಕೇಂದ್ರ ಸರ್ಕಾರ ಆಯ್ಕೆ ಮಾಡಿದ ರಾಜ್ಯಗಳಲ್ಲಿ ದಕ್ಷಿಣ ಭಾರತದ ಒಂದೇ ಒಂದು ರಾಜ್ಯವಿಲ್ಲ. ದಕ್ಷಿಣ ಭಾರತದ ಯಾವ ರಾಜ್ಯಗಳ ಒಂದೇ ಒಂದು ಜಿಲ್ಲೆಯಲ್ಲಿ 25 ಸಾವಿರ ಜನ ಮೇಲ್ಪಟ್ಟು ವಲಸೆ ಕಾರ್ಮಿಕರು ಮರಳಿಲ್ವೆ? ಹಾಗಾದ್ರೆ, ಈ ಭಾಗದ ವಲಸೆ ಕಾರ್ಮಿಕರು ಏನು ಮಾಡಬೇಕು. ಇವರಿಗೆ ಕೆಲಸ ಕೊಡೋದ್ಯಾರು? 50 ಸಾವಿರ ಕೋಟಿಯ ಯೋಜನೆ ಬರೀ ಉತ್ತರ ಭಾರತದವರಿಗೆ ಮಾತ್ರವೇ? ಜೂನ್ 20ರ ಶನಿವಾರ ಪ್ರಧಾನಿ ಮೋದಿ ಈ ಯೋಜನೆಗೆ ಚಾಲನೆ ನೀಡಲಿದ್ದು, ಅವರೇ ಇದಕೆಲ್ಲ ಉತ್ತರಿಸಬೇಕಿದೆ.




Leave a Reply

Your email address will not be published. Required fields are marked *

error: Content is protected !!