ಆಲಮೇಲದಲ್ಲಿ ತ್ರಿಚಕ್ರವಾಹನ ಪಲ್ಟಿ: ಓರ್ವ ಸಾವು

587

ಪ್ರಜಾಸ್ತ್ರ ಸುದ್ದಿ

ಆಲಮೇಲ: ವಿಜಯಪುರ ಜಿಲ್ಲೆಯ ಆಲಮೇಲ ಪಟ್ಟಣದ ದೇವಣಗಾಂವ ರಸ್ತೆಯಲ್ಲಿ ಟಂಟಂ ಪಲ್ಟಿಯಾಗಿ ಓರ್ವ ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾನೆ. ಟಂಟಂ ಚಲಿಸ್ತಿದ್ದಾಗ ನಾಯಿ ಅಡ್ಡ ಬಂದಿದೆ. ಅದನ್ನ ತಪ್ಪಿಸಲು ಹೋದಾಗ ವಾಹನ ಪಲ್ಟಿಯಾಗಿ ಅನಾಹುತ ಸಂಭವಿಸಿದೆ.

ಮದನಳ್ಳಿ ಗ್ರಾಮದ 58 ವರ್ಷದ ಶಂಕ್ರಪ್ಪ ಹೊಸೂರ ಮೃತ ವ್ಯಕ್ತಿಯಾಗಿದ್ದಾನೆ. ಆಲಮೇಲದಿಂದ ಮದನಹಳ್ಳಿ ಗ್ರಾಮಕ್ಕೆ ಹೋಗುತ್ತಿರುವ ಈ ಘಟನೆ ನಡೆದಿದೆ. ಇನ್ನು ಟಂಟಂನಲ್ಲಿದ್ದ ಮಹಿಳೆಗೆ ಗಂಭೀರ ಗಾಯವಾಗಿದ್ದು, ತಾಲೂಕು ಸ್ಪತ್ರೆಗೆ ದಾಖಲು ಮಾಡಲಾಗಿದೆ. ಆಲಮೇಲ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.




Leave a Reply

Your email address will not be published. Required fields are marked *

error: Content is protected !!