ಬಿಟೌನ್ ನೆಪೋಟಿಸಂ ಎಲ್ಲರನ್ನ ತುಳಿಯುತ್ತೆ: ಶಾಹಿಲ್

483

ಬಿಟೌನ್ ಅಂಗಳದಲ್ಲಿ ನೆಪೋಟಿಸಂ ಪದೆ ಆಗಾಗ ಚರ್ಚೆಗೆ ಬರುತ್ತೆ. ನಟಿ ಕಂಗನಾ ರಣವತ್ ಸಹ ಈ ಪದ ಬಳಕೆ ಮಾಡಿದ್ದಾರೆ. ನಟ ಸುಶಾಂತ ಸಿಂಗ್ ರಜಪೂತ್ ಸಾವಿನ ಬಳಿಕ ಮತ್ತೆ ನೆಪೋಟಿಸಂ ಪದ ಚರ್ಚೆಗೆ ಬಂದಿದೆ. ಅಂದ್ರೆ, ಸ್ವಜನಪಕ್ಷಪಾತ.

ಬಿಟೌನ್ ದುನಿಯಾದಲ್ಲಿ ಒಂದಿಷ್ಟು ಸಿನಿಮಾ ಮನೆತನಗಳಿವೆ. ಅವರು ಬಿಟ್ಟರೆ ಹೊಸಬರಿಗೆ ಬೆಳೆಯಲು ಬಿಡಿಲ್ಲ. ಅವರ ಕುಟುಂಬದ ಕುಡಿಗಳೇ ಮಿಂಚಬೇಕು. ಬೇರೆ ಯಾರೂ ಬಂದು ಹೀರೋ ಆಗಿ ಸ್ಟಾರ್ ಗಿರಿ ಪಡೆಯಲು ಬಿಡುವುದಿಲ್ಲ. ಸೈಲೆಂಟ್ ಆಗಿಯೇ ಅವರನ್ನ ತುಳಿದು ಬಿಡ್ತಾರೆ. ಈ ಬಗ್ಗೆ ನಟ ಶಾಹಿಲ್ ಖಾನ್ ಸಹ ಮಾತ್ನಾಡಿದ್ದಾರೆ.

ದೊಡ್ಡವರು ಎನಿಸಿಕೊಂಡವರು ಸಣ್ಣವರನ್ನ ಹೇಗೆ ತುಳಿಯುತ್ತಾರೆ ಎಂದು ಶಾಹಿಲ್ ಇನ್ಸಾಟಾಗ್ರಾಮ್ ನಲ್ಲಿ ಪೋಸ್ಟ್ ಮಾಡಿದ್ದಾರೆ. ಕೆಲ ವರ್ಷಗಳ ಹಿಂದೆ ಶಾಹಿಲ್ ಖಾನ್ ನಟನೆಯ ಎಕ್ಸ್ ಕ್ಯೂಸ್ ಮಿ ಹಾಗೂ ಸ್ಟೈಲ್ ಚಿತ್ರಗಳು ಹೆಸರು ತಂದು ಕೊಟ್ಟವು. ಆಗ್ಲೇ ಸಿಕ್ಸ್ ಪ್ಯಾಕ್ ಹೀರೋ ಎಂದು ಕರೆಸಿಕೊಂಡ ಶಾಹಿಲ್ ಫೋಟೋವನ್ನ ಪ್ರತಿಷ್ಠಿತ ಮ್ಯಾಗ್ ಜಿನ್ ಮುಖಪುಟದಲ್ಲಿ ಪ್ರಕಟಿಸಿತು.

ಆ ಮ್ಯಾಗ್ ಜಿನ್ ಮುಖಪುಟದಲ್ಲಿ ಇನ್ನಿಬ್ಬರು ಸ್ಟಾರ್ ಖಾನ್ ನಟರಿದ್ದಾರೆ. ಇವರ ಜೊತೆ ಶಾಹಿಲ್ ಖಾನ್ ಫೋಟೋ ಹಾಕಿ ದ್ ನ್ಯೂ ಖಾನ್ ಇನ್ ಟೌನ್ ಎಂದು ಲೇಖನ ಬರೆದಿದ್ರು. ಇದು ಕೆಲವರಿಗೆ ಇಷ್ಟವಾಗಲಿಲ್ವಂತೆ. ತಮ್ಮ ಚಿತ್ರಗಳಲ್ಲಿ ಸೈಡ್ ಪಾತ್ರಕ್ಕೆ ಕರೆದರಂತೆ. ರಿಯಾಲಿಟಿ ಶೋಗೆ ಕರೆದರಂತೆ. ಮುಂದೆ ಹಂತ ಹಂತವಾಗಿ ಅವಕಾಶಗಳನ್ನ ಕಿತ್ತುಕೊಂಡರಂತೆ. ದೊಡ್ಡವರ ಸಣ್ಣತನ. ಯಾರೆಂದು ಊಹೆ ಮಾಡಿ ಎಂದಿರುವ ಶಾಹಿಲ್, ಸುಶಾಂತ ಅವರ ಮುಖವಾಡ ಕಳಚಿದ್ದಾನೆ. ಕಳೆದ 20 ವರ್ಷಗಳಲ್ಲಿ ಜಾನ್ ಅಬ್ರಾಹಿಂ ಬಿಟ್ಟರೆ ಬೇರೆ ಯಾರು ಸ್ಟಾರ್ ಆಗ್ಲಿಲ್ಲ. ಸ್ಟಾರ್ ಮಕ್ಕಳು ಮಾತ್ರ ಸ್ಟಾರ್ ಆದ್ರು. ವಿಚಾರ ಮಾಡಿ. ರಿಪ್ ಸುಶಾಂತ ಸಿಂಗ್ ರಜಪೂತ್ ಎಂದು ಬರೆದಿದ್ದಾರೆ.




Leave a Reply

Your email address will not be published. Required fields are marked *

error: Content is protected !!