ಜಂಟಲ್ಮನ್- ಬಿಲ್ ಗೇಟ್ಸ್ ನಡುವೆ ಫೈಟ್

364

ಸ್ಯಾಂಡಲ್ ವುಡ್ ದುನಿಯಾದ ಬಿಲ್ ಗೇಟ್ಸ್ ಹಾಗೂ ಜಂಟಲ್ಮನ್ ನಡುವೆ ಫೆಬ್ರವರಿ 7ರಂದು ಫೈಟ್ ನಡೆಯಲಿದೆ. ಡೈನಾಮಿಕ್ ಪ್ರಿನ್ಸ್ ಪ್ರಜ್ವಲ ದೇವರಾಜ ನಟಿಸಿರುವ ಜಂಟಲ್ಮನ್ ಹಾಗೂ ಚಿಕ್ಕಣ್ಣ, ಶಿಶಿರ ಶಾಸ್ತ್ರಿ ನಟನೆಯ ಬಿಲ್ ಗೇಟ್ಸ್ ಸಿನ್ಮಾ ಒಟ್ಟಿಗೆ ರಿಲೀಸ್ ಆಗ್ತಿವೆ.

ವಿಭಿನ್ನ ಕಥೆಯಿಂದ ಜಂಟಲ್ಮನ್ ಚಿತ್ರ ಸೆಳೆಯುತ್ತಿದೆ. ಕಾಮಿಡಿಯೊಂದಿಗೆ ಭರ್ಜರಿ ಮಜಾ ಕೊಡಲು ಬರ್ತಿರುವ ಬಿಲ್ ಗೇಟ್ಸ್ ಹಾಸ್ಯಪ್ರಿಯರನ್ನ ಸೆಳೆಯುತ್ತಿದೆ. ಹೀಗಾಗಿ ಈ ಎರಡು ಚಿತ್ರಗಳ ನಡುವೆ ಒಂದಿಷ್ಟು ಫೈಟ್ ಆಗುವ ಸಾಧ್ಯತೆಯಿದೆ. ಹೀಗಾಗಿ ಸಿನಿ ರಸಿಕರು ಈ ಎರಡು ಚಿತ್ರಗಳನ್ನ ಕಾತುರದಿಂದ ಎದುರು ನೋಡ್ತಿದ್ದಾರೆ.




Leave a Reply

Your email address will not be published. Required fields are marked *

error: Content is protected !!