ರೀಲ್ ಕಥೆಯ ರಿಯಲ್ ‘ಜಂಟ್ಲಮನ್’

338

ನಟ ಡೈನಾಮಿಕ್ ಪ್ರಿನ್ಸ್ ಅಭಿನಯದ ಜಂಟ್ಲಮನ್ ಚಿತ್ರ ಸಾಕಷ್ಟು ಸೌಂಡ್ ಮಾಡ್ತಿದೆ. ಕಾರಣ ಹೀರೋ ಅತಿಯಾಗಿ ನಿದ್ದೆ ಮಾಡುವ ವಿಚಿತ್ರ ಪಾತ್ರಕ್ಕಾಗಿ. ಹೀರೋ ದಿನಕ್ಕೆ ಬರೋಬ್ಬರಿ 18 ಗಂಟೆ ನಿದ್ದೆ ಮಾಡ್ತಾನೆ. ಅದ್ಯಾಕೆ? ಕಥೆ ಏನು ಅನ್ನೋದು ತಿಳಿದುಕೊಳ್ಳಬೇಕು ಅಂದ್ರೆ ಸಿನ್ಮಾ ನೋಡ್ಬೇಕು. ಇದು ಬರೀ ರೀಲ್ ಲೈಫ್ ನಲ್ಲಿ ಅಲ್ಲ ರಿಯಲ್ ಲೈಫ್ ನಲ್ಲಿಯೂ ನಡೆಯುತ್ತೆ.

ಮುಂಬೈ ಮೂಲದ ರಾಜೀವ ಭಾಸಿನ್ ಅನ್ನೋ ವ್ಯಕ್ತಿ ದಿನಕ್ಕೆ 20 ಗಂಟೆ ನಿದ್ದೆ ಮಾಡ್ತಾರಂತೆ. 15 ರಿಂದ 16 ಗಂಟೆ ಮಲಗುವ ನಾನು ಒಮ್ಮೊಮ್ಮೆ 20 ಗಂಟೆ ಮಲಗುತ್ತೇನೆ ಅಂತಾ ಸ್ವತಃ ಅವರೆ ಹೇಳಿದ್ದಾರೆ. ಜಂಟಲ್ ಮನ್ ಚಿತ್ರದ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ನೋಡಿ ನಿರ್ದೇಶಕ ಜಡೇಶಕುಮಾರ ಹಂಪಿ ಅವರಿಗೆ ಕಾಲ್ ಮಾಡಿ ತಮ್ಮ ಅನುಭವ ಹಂಚಿಕೊಂಡಿದ್ದಾರೆ.

ಸ್ಲೀಪಿಂಗ್ ಡಿಸಾರ್ಡರ್ ಅನ್ನೋ ಕಾಯಿಲೆಯಿಂದ ಬಳಲು ವ್ಯಕ್ತಿಯ ಸುತ್ತ ನಡೆಯುವ ಕಥೆ ಚಿತ್ರದಲ್ಲಿದೆ. ತುಂಬಾ ಒಳ್ಳೆಯ ಕಥೆಯನ್ನ ಆಯ್ಕೆ ಮಾಡಿಕೊಂಡಿದ್ದೀರಿ. ಇಂಥಾ ಕಾಯಿಲೆಯಿಂದ ಸಾಕಷ್ಟು ಜನ ಬಳಲುತ್ತಿದ್ದಾರೆ. ಇದು ಅನೇಕರಿಗೆ ಗೊತ್ತಾಗುವುದಿಲ್ಲ ಅಂತಾ ಹೇಳಿದ್ದಾರೆ. 43 ವರ್ಷದ ರಾಜೀವ ಬಾಸಿನ್ ಅವರಿಗೆ 16ನೇ ವಯಸ್ಸಿನಲ್ಲಿ ಕಾಣಿಸಿಕೊಂಡ ಈ ಕಾಯಿಲೆ ಮತ್ತೆ 33ನೇ ವಯಸ್ಸಿನಲ್ಲಿ ಕಾಣಿಸಿಕೊಂಡಿತ್ತೆಂದು ಹೇಳಿದ್ದಾರೆ.

ನಟ ಪ್ರಜ್ವಲ ದೇವರಾಜಗೆ ಜೋಡಿಯಾಗಿ ನಿಶ್ವಿಕಾ ಕಾಣಿಸಿಕೊಂಡಿದ್ದಾರೆ. ಜಡೇಶಕುಮಾರ ಹಂಪಿ ನಿರ್ದೇಶನದ ಚಿತ್ರಕ್ಕೆ ನಿರ್ದೇಶಕ ಗುರು ದೇಶಪಾಂಡೆ ಬಂಡಾವಳ ಹೂಡಿದ್ದಾರೆ. ಈ ಚಿತ್ರ ಫೆಬ್ರವರಿ 7ರಂದು ರಿಲೀಸ್ ಆಗ್ತಿದೆ. ಪ್ರಜ್ವಲ ದೇವರಾಜ ವಿಭಿನ್ನ ಪಾತ್ರ ಅಭಿಮಾನಿಗಳಿಗೆ ಖುಷಿ ನೀಡಲಿದೆ.




Leave a Reply

Your email address will not be published. Required fields are marked *

error: Content is protected !!