ಜಂಟಲ್ ಮನ್ ಹಾಡುಗಳ ಅಬ್ಬರ

375

ಡೈನಾಮಿಕ್ ಪ್ರಿನ್ಸ್ ಪ್ರಜ್ವಲ ದೇವರಾಜ ನಟನೆಯ ಜಂಟಲ್ ಮನ್ ಚಿತ್ರದ ಹಾಡುಗಳ ಅಬ್ಬರ ಶುರುವಾಗಿದೆ. ಚಿತ್ರದ ಪ್ರತಿಯೊಂದು ಹಾಡುಗಳು ಅವರ ಅಭಿಮಾನಿಗಳಿಗೆ, ಚಿತ್ರರಸಿಕರಿಗೆ ಇಷ್ಟವಾಗ್ತಿವೆ. ಜಯಂತಿ ಕಾಯ್ಕಿಣಿ ಅವರ ಸಾಹಿತ್ಯ, ಖ್ಯಾತ ಗಾಯಕ ವಿಜಯ ಪ್ರಕಾಶ ಧ್ವನಿ, ಅಜಿನೀಶ ಲೋಕನಾಥ ಮ್ಯೂಸಿಕ್ ಹಾಡಿಗೆ ಮತ್ತಷ್ಟು ಮೆರಗು ನೀಡಿದೆ.

ಜಡೇಶ ಹಂಪಿ ಕುಮಾರ ನಿರ್ದೇಶನದ ಚಿತ್ರದಲ್ಲಿ ಪ್ರಜ್ವಲ ದೇವರಾಜಗೆ ಜೋಡಿಯಾಗಿ ನಿಶ್ಚಿಯ ನಾಯ್ಡು ಕಾಣಿಸಿಕೊಂಡಿದ್ದಾರೆ. ಚಿತ್ರ ರಿಲೀಸ್ ಗೂ ಮೊದ್ಲೇ ತೆಲುಗು, ತಮಿಳು ನಿರ್ಮಾಪಕರು ರೈಟ್ಸ್ ಪಡೆದಿದ್ದಾರೆ. ಹೀಗಾಗಿ ಚಿತ್ರಕ್ಕೆ ಮೊದಲ ಜಯ ಸಿಕ್ಕಿದೆ. ಜನವರಿ 31ರಂದು ಚಿತ್ರ ರಾಜ್ಯಾದ್ಯಂತ ರಿಲೀಸ್ ಆಗ್ತಿದೆ.




Leave a Reply

Your email address will not be published. Required fields are marked *

error: Content is protected !!