ಕರೋನಾ ಲಾಕ್ ಡೌನ್ ನಿಂದಾಗಿ ಚಿತ್ರರಂಗದ ಮಂದಿಯಲ್ಲ ಮನೆಯಲ್ಲಿ ಒಂದಲ್ಲ ಒಂದು ರೀತಿಯಿಂದ ಮಸ್ತಿ ಮಾಡುತ್ತಾ ಕಾಲ ಕಳೆಯುತ್ತಿದ್ದಾರೆ. ಅದೇ ರೀತಿ ನಟ ಪ್ರಜ್ವಲ ದೇವರಾಜ ಸಹ ಪತ್ನಿ ಜೊತೆಗೆ ಭರ್ಜರಿಯಾಗಿ ಸ್ಟೆಪ್ಸ್ ಹಾಕಿದ್ದಾರೆ.
ಅಬುಸಾದಮೆಂಟ್ ಅನ್ನೋ ಬ್ರೆಜಿಲಿಯನ್ ಹಾಡಿಗೆ ಈ ಜೋಡಿ ಹೆಜ್ಜೆ ಹಾಕಿದೆ. ಅದನ್ನ ಇನ್ಸ್ಟಾಗ್ರಾಮ್ ನಲ್ಲಿ ಹಂಚಿಕೊಂಡಿದ್ದು, 1.5 ನಿಮಿಷದ ಸ್ಟೆಪ್ಸ್ ನ್ನ ಇದುವರೆಗೂ 11 ಸಾವಿರಕ್ಕೂ ಅಧಿಕ ಮಂದಿ ನೋಡಿದ್ದಾರೆ.