ಹೊಸ ಪಕ್ಷ ಸ್ಥಾಪಿಸಿದ ಆಜಾದ್

207

ಪ್ರಜಾಸ್ತ್ರ ರಾಷ್ಟ್ರೀಯ ಸುದ್ದಿ

ಜಮ್ಮು-ಕಾಶ್ಮೀರ: ಮಾಜಿ ಮುಖ್ಯಮಂತ್ರಿ, ಮಾಜಿ ಕೇಂದ್ರ ಸಚಿವ ಗುಲಾಂ ನಬಿ ಆಜಾದ್ ಕಾಂಗ್ರೆಸ್ ನೊಂದಗಿನ ಸಂಬಂಧ ಕಡಿದುಕೊಂಡ ಬಳಿಕ, ಸೋಮವಾರ ಹೊಸ ಪಕ್ಷ ಘೋಷಣೆ ಮಾಡಿದ್ದಾರೆ. ಡೆಮಾಕ್ರಟಿಕ್ ಆಜಾದ್ ಪಾರ್ಟಿ ಎಂದು ಹೆಸರು ಘೋಷಿಸಿದ್ದಾರೆ.

ಈ ವೇಳೆ ಮಾತನಾಡಿದ ಅವರು ನನ್ನ ಹೊಸ ಪಕ್ಷಕ್ಕಾಗಿ 1,500 ಹೆಸರಗಳು ಬಂದವು. ಅದರಲ್ಲಿ ಉರ್ದು, ಸಂಸ್ಕೃತದಲ್ಲಿ ಇದ್ದವು. ಹಿಂದಿ ಹಾಗೂ ಉರ್ದುವಿನ ಮಿಶ್ರಿಣ ಹಿಂದೂಸ್ಥಾನಿ. ಪ್ರಜಾಪ್ರಭುತ್ವ ದೇಶ ಶಾಂತಿ ಮತ್ತು ಸ್ವತಂತ್ರವಾಗಿರಬೇಕೆಂದು ನಾವು ಬಯಸುತ್ತೇವೆ ಎಂದಿದ್ದಾರೆ.

73 ವರ್ಷದ ಗುಲಾಂ ನಬಿ ಆಜಾದ್ ಬರೋಬ್ಬರಿ 50 ವರ್ಷಗಳ ಕಾಲ ಕಾಂಗ್ರೆಸ್ ನಲ್ಲಿದ್ದುಕೊಂಡು ಕಣಿವೆ ನಾಡಿನ ಮುಖ್ಯಮಂತ್ರಿ ಸೇರಿದಂತೆ ಹಲವು ಉನ್ನತ ಹುದ್ದೆಗಳನ್ನು ಅಲಂಕರಿಸಿದವರು. ಆದರೆ, ಕಳೆದ ಆಗಸ್ಟ್ 26ರಂದು ಕಾಂಗ್ರೆಸ್ ಪಕ್ಷದ ಎಲ್ಲ ಸ್ಥಾನಗಳಿಗೆ ರಾಜೀನಾಮೆ ಸಲ್ಲಿಸಿದರು.




Leave a Reply

Your email address will not be published. Required fields are marked *

error: Content is protected !!