ನಗೆಪಾಟಿಲಿಗೆ ಹುಬ್ಬಳ್ಳಿ-ಧಾರವಾಡ ಬಿಜೆಪಿ ನಾಯಕರು

228

ಪ್ರಜಾಸ್ತ್ರ ಸುದ್ದಿ

ಹುಬ್ಬಳ್ಳಿ: ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ವತಿಯಿಂದ ಪೌರ ಸನ್ಮಾನ ಕಾರ್ಯಕ್ರಮ ಸೋಮವಾರ ಆಯೋಜಿಸಲಾಗಿದೆ. ಇದಕ್ಕೆ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಆಗಮಿಸಿದ್ದಾರೆ. ಇವರ ಆಗಮನಕ್ಕೆ ಶುಭ ಕೋರಿ ಬಿಜೆಪಿ ನಾಯಕರು ಫ್ಲೆಕ್ಸ್, ಬ್ಯಾನರ್ ಹಾಕಿದ್ದಾರೆ.

ಬಿಜೆಪಿ ನಾಯಕರು ಫ್ಲೆಕ್ಸ್ ಹಾಕಿ ಸ್ವತಃ ಅವರೆ ನಗೆಪಾಟಿಲಿಗೆ ತುತ್ತಾಗಿದ್ದಾರೆ. ಕಾರಣ ಏನಂದರೆ ರಾಷ್ಟ್ರದ ಮೊದಲ ಮಹಿಳಾ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರಿಗೆ ಸ್ವಾಗತ ಎಂದಿದ್ದಾರೆ. ಪ್ರತಿಭಾದೇವಿ ಸಿಂಗ್ ಪಾಟೀಲ ದೇಶದ ಮೊದಲ ಮಹಿಳಾ ರಾಷ್ಟ್ರಪತಿ. ಬಿಜೆಪಿ ನಾಯಕರ ಬ್ಯಾನರ್ ನೋಡಿದ ಸಾರ್ವನಿಕರು ಶಾಸಕ ಅರವಿಂದ್ ಬೆಲ್ಲದ್ ಅವರಿಗೆ ಸಾಮಾನ್ಯ ಜ್ಞಾನ ಇಲ್ಲವೇ ಎಂದು ಪ್ರಶ್ನಿಸಿದ್ದಾರೆ.

ಇನ್ನು ಒತ್ತಡ ಕೆಲಸದಲ್ಲಿ ಶಾಸಕರು ಗಮನ ಹರಿಸಲು ಆಗಿಲ್ಲ ಅನ್ನೋದಾದರೆ ಈ ಬ್ಯಾನರ್, ಫ್ಲೆಕ್ಸ್, ಬಟ್ಟಿಂಗ್ ಜವಾಬ್ದಾರಿ ವಹಿಸಿಕೊಂಡಿರುವವರಾದರೂ ಇದನ್ನು ನೋಡಬೇಕಲ್ಲವೇ? ರಾಷ್ಟ್ರಪತಿಯಾದ ಮೊದಲ ಆದಿವಾಸಿ ಮಹಿಳೆ ದ್ರೌಪದಿ ಮುರ್ಮು ಅವರು. ಆದರೆ, ಮೊದಲ ಮಹಿಳಾ ರಾಷ್ಟ್ರಪತಿ ಎಂದಿರುವುದಕ್ಕೆ ಜನರು ಬಿಜೆಪಿ ನಾಯಕರನ್ನು ಅಪಹಾಸ್ಯ ಮಾಡುತ್ತಿದ್ದಾರೆ.




Leave a Reply

Your email address will not be published. Required fields are marked *

error: Content is protected !!