ಫಲಿತಾಂಶ ನೋಡಲು ಹೋದವಳು ಕಾಣೆ

294

ಪ್ರಜಾಸ್ತ್ರ ಸುದ್ದಿ

ವಿಜಯಪುರ: ಡಿಪ್ಲೋಮಾ ಅಂತಿಮ ವರ್ಷದ ಫಲಿತಾಂಶ ನೋಡಿಕೊಂಡು ಬರಲು ಹೋದ ಯುವತಿ ನಾಪತ್ತೆಯಾದ ಘಟನೆ ಗುಮ್ಮಟನಗರಿಯಲ್ಲಿ ನಡೆದಿದೆ. ಆದರ್ಶ ನಗರದ ನಿವಾಸಿ ವೈಷ್ಣವಿ ಆದಿತ್ಯ ಪಾಟೀಲ(21) ಕಾಣೆಯಾದ ಯುವತಿಯಾಗಿದ್ದಾಳೆ.

ಬಿಎಲ್ ಡಿಇ ಡಿಪ್ಲೋಮಾ ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿದ್ದು, ಅಂತಿಮ ವರ್ಷದ ಫಲಿತಾಂಶ ನೋಡಿಕೊಂಡು ಬರಲು ನವೆಂಬರ್ 4ರಂದು ಮನೆಯಿಂದ ಹೋಗಿದ್ದು, ಇದುವರೆಗೂ ವಾಪಸ್ ಬಂದಿಲ್ಲ ಎಂದು ಮಾವ ಆದರ್ಶ ನಗರ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ತನ್ನ ಸೊಸೆ ನಾಪತ್ತೆ ಸಂಬಂಧ ಎಲ್ಲ ಕಡೆ ಹುಡುಕಲಾಗಿದೆ. ಸಂಬಂಧಿಕರು ಸೇರಿಕೊಂಡು ಎಲ್ಲ ಹುಡುಕಿದರೂ ಸಿಗದೆ ಇರುವುದರಿಂದ ತಡವಾಗಿ ದೂರು ದಾಖಲಿಸಿದ್ದೇವೆ ಎಂದು ತಿಳಿಸಿದ್ದಾರೆ. ಯುವತಿ ಕುರಿತು ಮಾಹಿತಿ ಸಿಕ್ಕರೆ ಕೂಡಲೇ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಥವ ಆದರ್ಶ ನಗರ ಠಾಣೆಗೆ 08352263333 ಸಂಪರ್ಕಿಸಲು ಪ್ರಕಟಣೆಯಲ್ಲಿ ತಿಳಿಸಲಾಗಿದೆ.




Leave a Reply

Your email address will not be published. Required fields are marked *

error: Content is protected !!