ಯೇಸು ನುಡಿದ ಮಾತನ್ನ ಇಂದು ಪುರಃರುಚ್ಚರಿಸಬೇಕಿದೆ: ಡಾ.ಮಾರ್ಟಿನ್ ಪುನೀತ

449

ಧಾರವಾಡ: ಇಂದು ಎಲ್ಲೆಡೆ ಕ್ರೈಸ್ತ್ ಬಾಂಧವರು ಗುಡ್ ಫ್ರೈಡೇ ಆಚರಣೆ ಮಾಡ್ತಿದ್ದಾರೆ. ಡೆಡ್ಲಿ ಕರೋನಾದಿಂದಾಗಿ ಮನೆಗಳಲ್ಲಿಯೇ ಗುಡ್ ಫ್ರೈಡೇ ಆಚರಣೆ ಮಾಡುವ ಮೂಲಕ, ಯೇಸುಕ್ರಿಸ್ತ್ ಶಿಲುಬೆಗೇರಿ ಪ್ರಾಣತ್ಯಾಗ ಮಾಡಿದ ದಿನವನ್ನ ನೆನಪಿಸಿಕೊಂಡು, ನಿನ್ನನ್ನು ಶಿಲುಬೆಗೇರಿಸಿದವರನ್ನ ಕ್ಷಮಿಸುಬಿಡು ಎಂದು ಕೇಳಿಕೊಳ್ಳುತ್ತಾರೆ.

ಡಾ.ಮಾರ್ಟಿನ್ ಜೆ ಪುನೀತ

ಗುಡ್ ಫ್ರೈಡೇ ಬಗ್ಗೆ ಹುಬ್ಬಳ್ಳಿಯ ಮೈಯರ್ ಮೆಮೋರಿಯಲ್ ಚರ್ಚ್ ನ ಸದಸ್ಯ ಹಾಗೂ ಕಿಟೆಲ್ ಆರ್ಟ್ಸ್ ಕಾಲೇಜಿನ ನಿವೃತ್ತ ಪ್ರಾಚಾರ್ಯರಾದ ಡಾ.ಮಾರ್ಟಿನ್ ಜೆ ಪುನೀತ ಅವರು ಮಾತ್ನಾಡಿದ್ದಾರೆ. ಯೇಸು ತನ್ನನ್ನು ಶಿಲುಬೆಗೆ ಏರಿಸಿದವರನ್ನ ಕ್ಷಮಿಸಿ ಬಿಡು ಎಂದು ನುಡಿದ ಮಾತನ್ನ ಇಂದು ನಾವು ಪುರಃರುಚ್ಚರಿಸಬೇಕಿದೆ.  ಜನರು ತಮಗೆ ಅರಿವಿಲ್ಲದೇ ಅನ್ಯಾಯ, ಅನಾಚಾರ ಹಾಗೂ ಪರಿಸರವನ್ನ ಹಾಳು ಮಾಡಿದರ ಪರಿಣಮವಾಗಿ ಕರೋನಾ ಎಂಬ ಮಾರಿ ಇಡೀ ಜಗತ್ತನ್ನ ತಲ್ಲಣಗೊಳಿಸಿದೆ ಎಂದಿದ್ದಾರೆ.

ಮನುಷ್ಯ ಮಾಡಿದ ಅನಾಚಾರದಿಂದ ಮನುಕುಲವೇ ವಿನಾಶದ ಅಂಚಿನತ್ತ ಸಾಗುತ್ತಿದೆ. ಕರೋನಾ ವೈರಸ್ ನಿಂದ ಎಲ್ಲರನ್ನೂ ರಕ್ಷಿಸುವಂತೆ ಹಾಗೂ ಮಾನವನ ತಪ್ಪುಗಳನ್ನು ಕ್ಷಮಿಸುವಂತೆ ಏಸುವಿನಲ್ಲಿ ನಾವೆಲ್ಲರೂ ಪ್ರಾರ್ಥಿಸೋಣ. ಆದಷ್ಟು ಬೇಗನೆ ಮಹಾಮಾರಿ ಕರೋನಾ ವೈರಸ್ ಈ ಜಗತ್ತನ್ನ ಬಿಟ್ಟು ಹೋಗಲಿ ಎಂದು ಅವರು ಪ್ರಾರ್ಥಿಸಿಕೊಂಡಿದ್ದಾರೆ.




Leave a Reply

Your email address will not be published. Required fields are marked *

error: Content is protected !!