ವಿದ್ಯಾರ್ಥಿಗಳು ಶಿಕ್ಷಕರನ್ನು ಗೌರವದಿಂದ ಕಾಣಬೇಕು: ಶಾಸಕ ಭೂಸನೂರ

277

ಪ್ರಜಾಸ್ತ್ರ ಸುದ್ದಿ

ಸಿಂದಗಿ: ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಕಟ್ಟಡಗಳ, ಪ್ರಸಕ್ತ ಸಾಲಿನ ಸಾಂಸ್ಕೃತಿಕ, ಕ್ರೀಡಾ ಹಾಗೂ ಎನ್ಎಸ್ಎಸ್ ಚಟುವಟಿಕೆಗಳ ಕಾರ್ಯಕ್ರಮವನ್ನು ಶಾಸಕ ರಮೇಶ ಭೂಸನೂರ ಉದ್ಘಾಟಿಸಿದರು. ಕಾಲೇಜಿನ ಆವರಣದಲ್ಲಿ ಆಯೋಜಿಸಿದ್ದ ಕಾರ್ಯಕ್ರಮವನ್ನು ದೀಪ ಬೆಳಗಿಸುವ ಮೂಲಕ ಉದ್ಘಾಟಿಸಿದರು.

ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಸರ್ಕಾರಿ ಶಾಲಾ, ಕಾಲೇಜುಗಳಲ್ಲಿ ಗುಣಮಟ್ಟದ ಶಿಕ್ಷಣ ಸಿಗುವುದಿಲ್ಲ ಅನ್ನೋ ಕೊರಗು ಬಹುತೇಕ ಪೋಷಕರಲ್ಲಿದೆ. ಆದರೆ, ಈಗ ಸರ್ಕಾರಿ ಶಿಕ್ಷಣ ವ್ಯವಸ್ಥೆ ಹಿಂದಿನಂತೆ ಇಲ್ಲ. ಖಾಸಗಿ ಶಾಲಾ, ಕಾಲೇಜುಗಳೊಂದಿಗೆ ಪೈಪೋಟಿ ನೀಡುವ ಮಟ್ಟದಲ್ಲಿದ್ದು, ನುರಿತ ಶಿಕ್ಷಕ ಬಳಗ, ಒಳ್ಳೆಯ ಕಟ್ಟಡಗಳ ವ್ಯವಸ್ಥೆ ನೀಡುವಲ್ಲಿ ಸರ್ಕಾರ ಸಿದ್ಧವಿದೆ. ಪ್ರತಿಯೊಬ್ಬ ವಿದ್ಯಾರ್ಥಿಯೂ ಶಿಕ್ಷಕರನ್ನು ಗೌರವದಿಂದ ಕಾಣಬೇಕು ಅಂತಾ ಹೇಳಿದರು.

ಇದೆ ವೇಳೆ ಪ್ರಥಮ ವರ್ಷದ ವಿದ್ಯಾರ್ಥಿಗಳ ಸ್ವಾಗತ ಕಾರ್ಯಕ್ರಮ ಸಹ ನಡೆಯಿತು. ವೇದಿಕೆ ಮೇಲೆ ಪ್ರಾಚಾರ್ಯ ಡಾ.ಸತೀಶಕುಮಾರ ಗಾಯಕವಾಡ, ಸಯ್ಯದ್ ಸಿರಾಜುದ್ದೀನ್ ಕಾದರಿ, ಯಮನಪ್ಪ ತಳಗೇರಿ, ತೇಜಶ್ವಿನಿ, ಎಸ್.ಜಿ ಬಮ್ಮನಳ್ಳಿ, ಗುತ್ತಿಗೆದಾರ ವೆಂಕಟೇಶ, ಕೆಎಚ್ ಬಿ ಎಇಇ ಉಪಸ್ಥಿತರಿದ್ದರು.

ಸಿಬ್ಬಂದಿ ಕೃಷ್ಣಾರೆಡ್ಡಿ, ಕಾಶೀನಾಥ ಜಾಧವ, ರಿಯಾಜ್ ಅಹ್ಮದ್ ಜಾಗೀರದಾರ್, ಸಯ್ಯದ್ ಮುಜೀರ್, ಎನ್.ಬಿ ಪಾಟೀಲ, ಸರೇಶ ಡಬ್ಬಿ ಸೇರಿ ಇತರರು ಹಾಜರಿದ್ದರು. ವಿದ್ಯಾರ್ಥಿನಿ ಪೂಜಾ ರಾಠೋಡ ಪ್ರಾರ್ಥಿಸಿದರು. ಸೀಮಾ ದಳವಾಯಿ ಸ್ವಾಗತ ಗೀತೆ ಹೇಳಿದರು. ಪ್ರಾಧ್ಯಾಪಕಿ ಆಯುಷಾ ಸಿದ್ದಿಕಿ ಸ್ವಾಗತಿಸಿದರು. ನೀಲಮ್ಮ ಹತ್ತಳ್ಳಿ ನಿರೂಪಿಸಿದರು.




Leave a Reply

Your email address will not be published. Required fields are marked *

error: Content is protected !!