ಉದ್ಯೋಗ ಖಾತರಿ ಮಾನವ ದಿನ ಹೆಚ್ಚಿಸಲು ಹೋರಾಟ

251

ಪ್ರಜಾಸ್ತ್ರ ಸುದ್ದಿ

ಸಿಂದಗಿ: ಉದ್ಯೋಗ ಖಾತರಿ ಯೋಜನೆ ಅಡಿಯಲ್ಲಿ ಮಾನ ದಿನಗಳನ್ನ 200 ದಿನಗಳಿಗೆ ಹಚ್ಚಿಸುವಂತೆ ಆಗ್ರಹಿಸಿ ಗ್ರಾಮೀಣ ಕೂಲಿ ಕಾರ್ಮಿಕರ ಸಂಘಟನೆ ವತಿಯಿಂದ ಪ್ರತಿಭಟನೆ ನಡೆಸಲಾಯ್ತು.

ಪಟ್ಟಣದ ತಹಶೀಲ್ದಾರ್ ಕಚೇರಿ ಎದುರು ಸೇರಿದ ಕೂಲಿ ಕಾರ್ಮಿಕರು ಪ್ರತಿಭಟನೆ ನಡೆಸಿದ್ರು. ತಮಗೆ ಕೆಲಸ ನೀಡಬೇಕು ಎಂದು ಒಡಲ ನೋವಿನ ಗೀತೆ ಹಾಡಿದ್ರು. ಕೋವಿಡ್ 19ನಿಂದ ನಗರಗಳಲ್ಲಿದ್ದ ಕಾರ್ಮಿಕರು ಮರಳಿ ಸ್ವಗ್ರಾಮಕ್ಕೆ ಬಂದಿದ್ದಾರೆ. ಈಗಾಗ್ಲೇ 100 ದಿನ ಪೂರೈಸಿದ್ದು, ಉದ್ಯೋಗ ಖಾತರಿ ಮಾನವ ದಿನಗಳನ್ನ 200 ದಿನಕ್ಕೆ ಹೆಚ್ಚಿಸಬೇಕು. ಪಡಿತರ ಚೀಟಿಯಲ್ಲಿ 5 ಕೆಜಿ ಹೆಚ್ಚಿನ ಆಹಾರ ದಾನ್ಯವನ್ನ ಇನ್ನೂ 6 ತಿಂಗಳು ಹೆಚ್ಚಿಸಬೇಕು ಅನ್ನೋ ಬೇಡಿಕೆಯನ್ನ ತಹಶೀಲ್ದಾರ್ ಅವರ ಮೂಲಕ ಸರ್ಕಾರಕ್ಕೆ ಸಲ್ಲಿಸಿದ್ರು.

ಈ ವೇಳೆ ಶಂಕರ, ಬಸವರಾಜ ದೊಡಮನಿ, ಲಕ್ಷ್ಮೀಬಾಯಿ ಬರಗಾಲ, ನೀಲ್ಲಮ್ಮ ಚಿಂಚೋಳ್ಳಿ, ನೀಲಮ್ಮ ದೇಗಿನಾಳ, ಭಾಗಮ್ಮ ಬುಳ್ಳಿ, ದ್ರಾಕ್ಷಾಯಿಣಿ ಹಿರೇಮಠ, ಪುಷ್ಪಾ ಸೇರಿದಂತೆ ಅನೇಕರು ಭಾಗವಹಿಸಿದ್ರು.




Leave a Reply

Your email address will not be published. Required fields are marked *

error: Content is protected !!