ಬಡವರ ಪಾಲಿನ ಅನ್ನಪೂರ್ಣೇಶ್ವರಿ

490

ವ್ಯಾಪಾರ ಅಂದಾಕ್ಷಣ ಪ್ರತಿಯೊಬ್ಬರು ವಿಚಾರ ಮಾಡುವುದು ಲಾಭ. ಯಾವ ಬ್ಯುಸಿನೆಸ್ ಮಾಡಿದ್ರೆ ಎಷ್ಟು ಲಾಭ ಸಿಗುತ್ತೆ. ನಷ್ಟವಿಲ್ಲದೆ ವ್ಯಾಪಾರ ಮಾಡುವುದು ಹೇಗೆ ಅನ್ನೋ ವಿಚಾರದಲ್ಲಿರುವ ಜನರ ನಡುವೆ ಕೆಲವರು ಪರೋಪಕಾರಿ ಗುಣಗಳನ್ನ ಬೆಳೆಸಿಕೊಂಡಿರ್ತಾರೆ. ಹೀಗಾಗಿ ಇವರು ಲಾಭಕ್ಕಿಂತ ಬಡವರ ಸೇವೆ ಮುಖ್ಯ ಅಂತಾರೆ. ಅಂತವರ ಸಾಲಿನಲ್ಲಿ ಚೆನ್ನೈನ ಈ ಅಜ್ಜಿ ಇದ್ದಾರೆ.

ತಮಿಳುನಾಡಿನ ಕೊಯಮತ್ತೂರಿನ ವಡಿವೇಲಂ ಪಳಯಂನ ಕಮಲಥನ್ ಅನ್ನೋ 80 ವರ್ಷದ ವೃದ್ಧೆ ಕೇವಲ 1 ರೂಪಾಯಿಗೆ ಒಂದು ಇಡ್ಲಿ ಮಾರಾಟ ಮಾಡ್ತಿದ್ದಾರೆ. 10, 20 ರೂಪಾಯಿಗೊಂದು ಇಡ್ಲಿ ಇರುವಾಗ ಈ ಅಜ್ಜಿ 1 ರೂಪಾಯಿಗೆ ಒಂದು ಇಡ್ಲಿ ನೀಡ್ತಿರುವುದು ನಿಜಕ್ಕೂ ಅಚ್ಚರಿಯ ವಿಚಾರ.

ಕಳೆದ 30 ವರ್ಷಗಳಿಂದ ಚಿಕ್ಕದಾದ ಅಂಗಡಿ ಇಟ್ಟುಕೊಂಡು ಇಡ್ಲಿ ವ್ಯಾಪಾರ ಮಾಡ್ತಿದ್ದಾರೆ. 10 ವರ್ಷಗಳ ಹಿಂದೆ 50 ಪೈಸೆಗೊಂದು ಇಡ್ಲಿ ನೀಡ್ತಿದ್ರಂತೆ. ಇದೀಗ 1 ರೂಪಾಯಿಗೆ ಕೊಡ್ತಿದ್ದಾರೆ. ನಾನು ಲಾಭ ನಷ್ಟದ ಬಗ್ಗೆ ವಿಚಾರ ಮಾಡುವುದಿಲ್ಲ. ಬಡವರ ಒಂದು ಹೊತ್ತಿನ ಹೊಟ್ಟೆ ತುಂಬುತ್ತಾ ಅಷ್ಟು ಸಾಕು ಅಂತಾರೆ ಕಮಲಥನ್.

ಇವರದು ಕೂಡುಕುಟುಂಬವಾಗಿರುವುದ್ರಿಂದ ಯಾವುದೇ ಕೆಲಸದವರಿಲ್ಲ. ಎಲ್ಲ ಮನೆಯವರೆ ಮಾಡುತ್ತಾರೆ. ಬೆಳಗ್ಗೆ 4ಗಂಟೆಗೆ ಏಳುವ ಅಜ್ಜಿ 7 ಗಂಟೆ ಅನ್ನುವಷ್ಟರಲ್ಲಿ ಅಂಗಡಿ ಶುರು ಮಾಡ್ತಾರೆ. ದಿನಕ್ಕೆ ಒಂದು ಸಾವಿರಕ್ಕೂ ಹೆಚ್ಚು ಇಡ್ಲಿ ಮಾರಾಟ ಮಾಡ್ತಾರಂತೆ. ಈ ಅಜ್ಜಿಯ ಇಡ್ಲಿ ಕೊಯಮತ್ತೂರಿನಲ್ಲಿ ಫುಲ್ ಫೇಮಸ್. ಕೆಲವರು ಹೀಗೆ.. ತಮ್ಮ ಸುಖಕ್ಕಿಂತ ಇತರರ ಕಣ್ಣೀರು ಒರೆಸುವ ಕೈ ಆಗ್ತಾರೆ.




Leave a Reply

Your email address will not be published. Required fields are marked *

error: Content is protected !!