ವಿದ್ಯಾಕಾಶಿಯಲ್ಲಿ ಪ್ರತಿಭಾ ಕಾರಂಜಿ

364

ಧಾರವಾಡ: ನಗರದ ಕ್ಲಾಸಿಕ್ ಇಂಟರ್ ನ್ಯಾಷನಲ್ ಶಾಲೆಯಲ್ಲಿ ಸಪ್ತಾಪೂರ ಹಾಗೂ ಪಿ.ಎಚ್.ಕ್ಯೂ ಕನ್ನಡ ಕ್ಲಸ್ಟರ್ ಪ್ರತಿಭಾ ಕಾರಂಜಿ ಕಾರ್ಯಕ್ರಮ ನಡೆಸಲಾಯ್ತು.

ಈ ವೇಳೆ ಉದ್ಘಾಟಕರಾಗಿ ಮಾತ್ನಾಡಿದ ಧಾರವಾಡ ಶಿಕ್ಷಣಾಧಿಕಾರಿ ಎ.ಎ ಖಾಜಿ, ಬಾಲ್ಯದ ದಿನಗಳನ್ನು ನೆಪಿಸಿಕೊಂಡರೆ ಮತ್ತೆ ಮರಳಿ ಬಾರದು. ಇಂದಿಗೂ ಆ ದಿನಗಳನ್ನ ನೆನಪಿಸಿಕೊಂಡರೆ ರೋಮಾಂಚನವಾಗುತ್ತದೆ. ಕಲಿಕೆಯೊಂದಿಗೆ ಮಕ್ಕಳ ಸರ್ವಾಂಗೀಣ ಅಭಿವೃದ್ಧಿ ಶಿಕ್ಷಣದ ಗುರಿಯಾಗಿದೆ ಎಂದು ಹೇಳಿದ್ದಾರೆ.

ಸಮಾಜ ಸದಾ ಬದಲಾವಣೆ ಹೊಂದುತ್ತಿರುತ್ತದೆ. ಇಂಥಹ ಬದಲಾವಣೆಗೆ ಎಲ್ಲಾ ಶಾಲೆಗಳಲ್ಲಿ ಶಿಕ್ಷಕರು ತಮ್ಮ ಪಾಠದ ಜೊತೆಗೆ ನಾಟಕ, ನೃತ್ಯ, ಸಂಗೀತ, ಕ್ರೀಡೆಗೆ ಹೆಚ್ಚು ಪ್ರೋತ್ಸಾಹ ನೀಡುವಂತಾಗಬೇಕೆಂದು ಕ್ಲಾಸಿಕ್ ಸಂಸ್ಥೆಯ ಅಧ್ಯಕ್ಷರಾದ ಲಕ್ಷ್ಮಣ ಉಪ್ಪಾರ ಹೇಳಿದ್ರು.

ವಿದ್ಯಾರ್ಥಿಗಳು ಯಾವುದೇ ಕ್ರೀಡೆ, ಲಲಿತ ಕಲೆಗಳಲ್ಲಿ ಬರುವ ಸಂಗೀತ, ನಾಟಕ, ನೃತ್ಯ ಈ ಎಲ್ಲ ಪ್ರಕಾರಗಳಲ್ಲಿ ಸೋಲು ಗೆಲುವು ಸಹಜ. ಸೋತೆನೆಂದು ಬಿಡದೆ ಪುನಃ ಭಾಗವಹಿಸಿದರೆ ಒಂದು ದಿನ ಜಯ ಸಿಗುವಂತಾಗುತ್ತದೆ ಎಂದು ಸಮೂಹ ಸಂಪನ್ಮೂಲ ವ್ಯಕ್ತಿ ಎಸ್ ಎನ್ ಇದಿಯಮ್ಮನವರ ಪ್ರಾಸ್ತವಿಕವಾಗಿ ಮಾತನಾಡಿದರು.

ಕಾರ್ಯಕ್ರಮದಲ್ಲಿ ಧಾರವಾಡದ ಅಖಿಲ ಕರ್ನಾಟಕ ರಂಗಭೂಮಿ ಕಲಾವಿದರ ಒಕ್ಕೂಟದ ಅಧ್ಯಕ್ಷರಾದ ಯಮನಪ್ಪ ಜಾಲಗಾರ, ಕಾರ್ಯದರ್ಶಿ ರಮೇಶ ಕುಂಬಾರ ನಿರ್ಣಾಯಕರಾಗಿ ಭಾಗವಹಿಸಿದ್ದರು. ಶಾಲೆ ಮುಖ್ಯೋಪಾಧ್ಯಯರು ಈ ವೇಳೆ ಉಪಸ್ಥಿತರಿದ್ದರು.




Leave a Reply

Your email address will not be published. Required fields are marked *

error: Content is protected !!