ಮದುವೆ ದಿನ ವರ ಎಸ್ಕೇಪ್, ಕಾರಣ ಕೇಳಿದ್ರೆ ತಲೆ ತಿರುಗುತ್ತೆ!

449

ಗ್ರೇಟರ್ ನೋಯಿಡಾ: ಉತ್ತರ ಪ್ರದೇಶದ ಗ್ರೇಟರ್ ನೊಯ್ಡಾ ನಗರದಲ್ಲೊಂದು ಮದುವೆ ಮುರಿದು ಬಿದ್ದಿದೆ. ಇದೆಲ್ಲ ಕಾಮನ್ ಅಂತಾ ನೀವು ಹೇಳಬಹುದು. ಆದ್ರೆ, ವರನ ಕಡೆಯವರು ವಧುವಿನ ಮನೆಯನ್ನೇ ಕೊಳ್ಳೆ ಹೊಡೆಯಲು ಹೊರಟಿದ್ದ ಸ್ಟೋರಿಯಿದು.

ಏಪ್ರಿಲ್ ನಲ್ಲಿ ನಡೆಯಬೇಕಿದ್ದ ಮದುವೆ ಕಳೆದ ಬಧುವಾರ ನಿಶ್ಚಯವಾಗಿತ್ತು. ಆದ್ರೆ, ಅದು ಸಹ ಮುರಿದುಬಿದ್ದಿದೆ. ಅದಕ್ಕೆ ಕಾರಣ, ವರನ ಮನೆಯವರ ಹನುಮನ ಬಾಲದ ರೀತಿಯಲ್ಲಿ ಕೇಳಿದ ವರದಕ್ಷಿಣೆಯ ಲಿಸ್ಟ್. ಇದು ಕೋಟಿ ಲೆಕ್ಕದಲ್ಲಿದೆ. ಯೆಸ್, 32 ವರ್ಷದ ಅಖಶಾತ ಗುಪ್ತಾ ಅನ್ನೋ ವರ ಬರೋಬ್ಬರಿ 1 ಕೋಟಿ ರೂಪಾಯಿ ವರದಕ್ಷಿಣೆಗೆ ಡಿಮ್ಯಾಂಡ್ ಮಾಡಿದ್ನಂತೆ. ಅದು ಕೊಡದೆ ಇರುವ ಕಾರಣಕ್ಕೆ ಮದುವೆ ದಿನವೇ ಎಸ್ಕೇಪ್ ಆಗಿದ್ದಾನೆ.

ಜೆಪಿ ಗ್ರೀನ್ಸ್ ನಲ್ಲಿ ಉದ್ಯಮಿಯಾಗಿರುವ ಅಖಶಾತ ಗುಪ್ತಾ, ಈತನ ತಂದೆ ವಿಜಯಕುಮಾರ, ತಾಯಿ ರಜನಿ ಗುಪ್ತಾ, ವರನ ಆರು ಜನ ಸಹೋದರಿಯರು ಸೇರಿದಂತೆ ಬೌನ್ಸರ್ ಗಳ ವಿರುದ್ಧ ಕಂಪ್ಲೀಟ್ ನೀಡಲಾಗಿದೆ. ಮದುವೆ ದಿನಾಂಕ ಘೋಷಣೆಯಾದ ದಿನದಿಂದಲೂ ವರನ ಮನೆಯವರು ಈ ಎಲ್ಲ ಡಿಮ್ಯಾಂಡ್ ಗಳನ್ನ ಮಾಡಿದ್ರು ಅಂತಾ ಹೇಳಲಾಗಿದೆ.

ವರನ ಕುಟುಂಬದ ಡಿಮ್ಯಾಂಡ್ಸ್ :

ಒಂದು ಕೋಟಿ ರೂಪಾಯಿ ನಗದು

ಫೈವ್ ಸ್ಟಾರ್ ಹೋಟೆಲ್ ನಲ್ಲಿ ಮದುವೆ

ವರನ 6 ಜನ ಸಹೋದರಿಯರು ಸೇರಿ ಸಂಬಂಧಿಕರಿಗೆ ಚಿನ್ನದ ನಾಣ್ಯಗಳು

ವರ ಹಾಗೂ ತಂದೆಗೆ ಚಿನ್ನದ ಸರಗಳು

ಮದುವೆ ಮೆರವಣಿಗೆಗೆ ಬಂದವರಿಗೆ ಹಣ

ಇದು ವರ ಮಹಾಶಯನ ಮನೆಯವರ ಕಡೆಯಿಂದ ಬಂದ ಲಿಸ್ಟ್ ಅಂತೆ. ಇದರಲ್ಲಿ ಯಾವುದುಕೆಲ್ಲ ವಧುನ ಕುಟುಂಬಸ್ಥರು ಒಪ್ಪಿಕೊಂಡಿದ್ರೋ ಗೊತ್ತಿಲ್ಲ. ಒಂದು ಕೋಟಿ ರೂಪಾಯಿ ಕೊಟ್ಟಿಲ್ಲ ಅನ್ನೋ ಕಾರಣಕ್ಕೆ ವರ ಮಂಟಪದಿಂದ ಕಾಲ್ಕಿತ್ತಿದ್ದಾನೆ. ಹೀಗಾಗಿ ಆತನ ಇಡೀ ಕುಟುಂಬದ ಮೇಲೆ ಕೇಸ್ ದಾಖಲಾಗಿದೆ.


TAG


Leave a Reply

Your email address will not be published. Required fields are marked *

error: Content is protected !!