ಗುತ್ತಿ ಬಸವಣ್ಣ ಏತನೀರಾವರಿ: ಸಚಿವರಿಗೆ ಶಾಸಕ ಮನಗೂಳಿ ಪತ್ರ

509

ಆಲಮಟ್ಟಿ: ಬಾಗಲಕೋಟೆ ಜಿಲ್ಲೆ ಆಲಮಟ್ಟಿಯಲ್ಲಿ ಜಲಸಂಪನ್ಮೂಲ ಸಚಿವ ರಮೇಶ ಜಾರಕಿಹೊಳಿ ನೇತೃತ್ವದಲ್ಲಿ ಜಿಲ್ಲೆಯ ಶಾಸಕರೊಂದಿಗೆ ಸಭೆ ನಡೆಸಿದ್ರು. ಈ ಭಾಗದ ನೀರಾವರಿ ಯೋಜನೆಗಳ ಕುರಿತು ಶಾಸಕರೊಂದಿಗೆ ಚರ್ಚೆ ನಡೆಸಿದ್ರು.

ಇನ್ನು ಸಿಂದಗಿ ಮತಕ್ಷೇತ್ರದ ಶಾಸಕ ಎಂ.ಸಿ ಮನಗೂಳಿ ಅವರು, ಗುತ್ತಿಬಸವಣ್ಣ ಏತನೀರಾವರಿ ಯೋಜನೆಗೆ ಸಂಬಂಧಿಸಿದಂತೆ ಸಚಿವರೊಂದಿಗೆ ಚರ್ಚಿಸಿದ್ರು. ಈ ಯೋಜನೆಯ 147 ಕಿಲೋ ಮೀಟರ್ ಟೇಲೆಂಡ್ ಮಧ್ಯದಲ್ಲಿರುವ 110 ಕಿಲೋ ಮೀಟರ್ ದಲ್ಲಿ ತಮ್ಮ ಮತಕ್ಷೇತ್ರದ ತಾಂಬಾ ಬಾಂದಾರವಿದೆ. ಅಲ್ಲಿ ಸಮಾರು 2 ಸಾವಿರ ಜನ ವಾಸವಾಗಿದ್ದಾರೆ. ಈಗಾಗ್ಲೇ 2 ಮೋಟರ್ ಮೂಲಕ ನೀರು ಹರಿಸುವುದು ಶುರುವಾಗಿದೆ. ಆದ್ರೆ, ಅದ್ರಿಂದ ತಾಂಬಾ ಬಾಂದಾರಕ್ಕೆ ನೀರು ಹರಿಯುವುದಿಲ್ಲ.

ಹೀಗಾಗಿ ಐದು ಮೋಟರ್ ಮೂಲಕ ನೀರು ಹರಿಸುವುದ್ರಿಂದ ತಾಂಬಾ ಬಾಂದರಕ್ಕೆ ನೀರು ದೊರೆಯಲಿದೆ. ಇದ್ರಿಂದ ಅಲ್ಲಿನ ಹಾಗೂ ಸುತ್ತಮುತ್ತಲಿನ ಜನಕ್ಕೆ, ದನಕರುಗಳಿಗೆ ನೀರು ಲಭ್ಯವಾಗುತ್ತೆ. ಹೀಗಾಗಿ ತಕ್ಷಣ ಐದು ಮೋಟರ್ ನಿಂದ ನೀರು ಹರಿಸಲು ಸೂಕ್ತ ಕ್ರಮಗಳನ್ನ ತೆಗೆದುಕೊಳ್ಳಬೇಕೆಂದು ಚರ್ಚಿಸಿ, ಮನವಿ ಪತ್ರ ನೀಡಿದ್ರು.

ಇದೇ ವೇಳೆ ಇಂಡಿ ಶಾಸಕ ಯಶವಂತರಾಯಗೌಡ, ಮುದ್ದೇಬಿಹಾಳ ಶಾಸಕ ಎ.ಎಸ್ ಪಾಟೀಲ ನಡಹಳ್ಳಿ, ಬಸವನಬಾಗೇವಾಡಿ ಶಾಸಕ ಶಿವಾನಂದ ಪಾಟೀಲ ಸೇರಿದಂತೆ ಹಲವು ಅಧಿಕಾರಿಗಳು ಭಾಗವಹಿಸಿದ್ರು.




Leave a Reply

Your email address will not be published. Required fields are marked *

error: Content is protected !!