ಎಸ್ಡಿಎಂಸಿ ಅಧ್ಯಕ್ಷರಾಗಿ ಚನ್ನಪ್ಪಗೌಡ ಬಿರಾದಾರ ಆಯ್ಕೆ

320

ಪ್ರಜಾಸ್ತ್ರ ಸುದ್ದಿ

ಸಿಂದಗಿ: ತಾಲೂಕಿನ ಹಂದಿಗನೂರ ಗ್ರಾಮದ ಸರ್ಕಾರಿ ಕನ್ನಡ ಹೆಣ್ಣು ಮಕ್ಕಳ ಹಿರಿಯ ಪ್ರಾಥಮಿಕ ಶಾಲೆಯ ನೂತನ ಎಸ್ಡಿಎಂಸಿಯನ್ನು ಡಿಸೆಂಬರ್ 1, 2023 ಶುಕ್ರವಾರ ರಚನೆ ಮಾಡಲಾಯಿತು.

18 ಸದಸ್ಯರುಗಳನ್ನು ಒಳಗೊಂಡ ನೂತನ ಸಮಿತಿ ರಚಿಸಲಾಯಿತು. ಅಧ್ಯಕ್ಷ ಹಾಗೂ ಉಪಾಧ್ಯಕ್ಷರನ್ನು ಎಲ್ಲರ ಒಪ್ಪಿಗೆಯ ಮೇರೆಗೆ ಅವಿರೋಧವಾಗಿ ಆಯ್ಕೆ ಮಾಡಲಾಯಿತು. ಅಧ್ಯಕ್ಷರನ್ನಾಗಿ ಚನ್ನಪ್ಪಗೌಡ ಎಸ್.ಬಿರಾದಾರ, ಉಪಾಧ್ಯಕ್ಷರಾಗಿ ಕಸ್ತೂರಿಬಾಯಿ ಮ.ಗುಬ್ಬೆವಾಡ ಇವರನ್ನು ಆಯ್ಕೆ ಮಾಡಲಾಯಿತು.

ಶಾಲೆಯ ನೂತನ ಎಸ್ಡಿಎಂಸಿ ರಚನೆಯ ಕಾರ್ಯಕ್ರಮದ ನೇತೃತ್ವವನ್ನು ಗ್ರಾಮ ಪಂಚಾಯತಿ ಅಧ್ಯಕ್ಷರಾದ ಈರಗಂಟೇಪ್ಪಗೌಡ ಎಂ. ಬಿರಾದಾರ ವಹಿಸಿಕೊಂಡಿದ್ದರು. ಈ ವೇಳೆ ಸಿಬ್ಬಂದಿ ವಿಶ್ವನಾಥ ಸರಬಡಗಿ, ಗ್ರಾಮದ ಮುಖಂಡರಾದ ಚಹ್ವಾಣ ಸಾಹುಕಾರ ಬಿಂಗೇರಿ, ನಿಂಗನಗೌಡ ಬಿರಾದಾರ, ಭೀಮಣ್ಣ ಮಳಿ, ಶಾಲೆಯ ನೂತನ ಎಸ್ಡಿಎಂಸಿ ಸದಸ್ಯರುಗಳಾದ ಉಮೇಶ ಚಹ್ವಾಣ, ಗುರಪ್ಪ ತಳವಾರ, ಅಂಬರಾಕಾ ಮಾದರ, ಸಿದ್ದನಗೌಡ ಬಿರಾದಾರ, ಪಾರ್ವತಿ ಡಾಂಗಿ, ಲಕ್ಷ್ಮೀ ಉಪ್ಪಾರ, ಚಂದ್ರಶೇಖರ ಗೌಡಗೇರಿ, ನಿಂಗಪ್ಪ ಇಟ್ಟಗಿ, ಗೋಪಾಲಸಿಂಗ್ ಹಜೇರಿ, ಹಣಮಂತ ಹಜೇರಿ, ವಿಜಯಲಕ್ಷ್ಮಿ ದಿಂಡವಾರ, ರೂಪಾ ಹಜೇರಿ, ಮಡಿವಾಳಪ್ಪಗೌಡ ಬಿರಾದಾರ, ಮಾದೇವಿ ಗುಡದಿನ್ನಿ , ಸಂಗೀತಾ ಚನಗೊಂಡ, ಗೀತಾ ಮಾಶ್ಯಾಳ ಹಾಗೂ ಶಾಲೆಯ ಮುಖ್ಯ ಗುರುಗಳಾದ ಸುಭಾಸ ಬುಲಬುಲೆ, ವೆಂಕಟಾಚಾರ್ಯರ ಕುಲಕರ್ಣಿ, ಶ್ರೀಕಾಂತ ಹಿರೇಮಠ ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.




Leave a Reply

Your email address will not be published. Required fields are marked *

error: Content is protected !!