ನಾಡು, ನುಡಿಗಾಗಿ ಕನ್ನಡಿಗರು ಜಾಗೃತರಾಗಬೇಕು: ಡಾ.ಭೇರ್ಯ ರಾಮಕುಮಾರ್

265

ಪ್ರಜಾಸ್ತ್ರ ಸುದ್ದಿ

ಬೆಳಗಾವಿ: ಕನ್ನಡಿಗರು ಜಾಗೃತರಾಗದಿದ್ದರೆ ಬೆಂಗಳೂರು ಹಾಗೂ ಬೆಳಗಾವಿಯ ಗಡಿ ಪ್ರದೇಶಗಳಲ್ಲಿ ಕನ್ನಡ ನುಡಿಯ ಸಾರ್ವಭೌಮಾತೆಗೆ ಧಕ್ಕೆ ಉಂಟಾಗುವುದು ಖಚಿತ ಎಂದು ಕನ್ನಡ ಸಾಹಿತ್ಯ ಪರಿಷತ್ತಿನ ದತ್ತಿ ಪ್ರಶಸ್ತಿ ಪುರಸ್ಕೃತ ಸಾಹಿತಿ ಡಾ.ಭೇರ್ಯ ರಾಮಕುಮಾರ್ ಆತಂಕ ವ್ಯಕ್ತಪಡಿಸಿದರು.

ಇಲ್ಲಿನ ಸಾಲಿಗ್ರಾಮ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ವತಿಯಿಂದ ನಡೆದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿದರು. ಅಂತಾರಾಷ್ಟ್ರೀಯ ಕಂಪನಿಗಳ ಫಲವಾಗಿ ಕರ್ನಾಟಕದ ರಾಜಧಾನಿಯಲ್ಲಿ ಅನ್ಯರಾಜ್ಯಗಳ ಜನತೆ ಹೆಚ್ಚುತ್ತಿದ್ದಾರೆ. ಕನ್ನಡ ನೆಲ, ಜಲ ಬಳಸುವ ಇವರು ಕನ್ನಡ ಭಾಷೆ ಕಲಿಕೆ ಬಗ್ಗೆ ತೀವ್ರ ನಿರ್ಲಕ್ಷ್ಯ ವಹಿಸುತ್ತಿದ್ದಾರೆ. ಪರಿಸ್ಥಿತಿ ಹೀಗೆ ಮುಂದುವರೆದರೆ ಕನ್ನಡ ನಾಡಿನ ರಾಜಧಾನಿಯಲ್ಲಿ ಕನ್ನಡಿಗರೇ ಅಲ್ಪ ಸಂಖ್ಯಾತರಾಗುವ ಸಾಧ್ಯತೆಯಿದೆ ಎಂದರು.

ನಿಪ್ಪಾಣಿ ಬಳಿಯ ಕಾರಟಗಿ ಗ್ರಾಮದಲ್ಲಿ ನೂತನ ಕನ್ನಡ ಶಾಲೆಯ ಶಂಕುಸ್ಥಾಪನೆ ಕಾರ್ಯಕ್ರಮಕ್ಕೆ ಅಡ್ಡಿಪಡಿಸಿದ ಅನ್ಯಭಾಷೆಯವರ ಕೃತ್ಯವನ್ನು ಖಂಡಿಸಿದ ಅವರು ಗಡಿನಾಡ ಕನ್ನಡಿಗರ ಸಮಸ್ಯೆಗಳಿಗೆ ರಾಜ್ಯಸರ್ಕಾರ, ಸಾಹಿತಿಗಳು, ಕನ್ನಡ ಪರ ಚಿಂತಕರು ಧ್ವನಿಯಾಗಬೇಕು ಅಂತಾ ಹೇಳಿದರು.

ಈ ವೇಳೆ ಸಾಲಿಗ್ರಾಮ ತಾಲೂಕು ಸಾಹಿತ್ಯ ಪರಿಷತ್ತು ಅಧ್ಯಕ್ಷ ಮಧುಚಂದ್ರ, ಉಪನ್ಯಾಸಕರಾದ ಡಾ
ಸಿ ಡಿ.ಪರಶುರಾಮ್, ನಿವೃತ್ತ ಉಪನ್ಯಾಸಕರಾದ ಎಸ್.ಆರ್.ರಾಮೇಗೌಡ, ಮಿಥಿಲ ವಿದ್ಯಾಸಂಸ್ಥೆಯ ಕಾರ್ಯದರ್ಶಿ ಎಂ.ಬಿ.ಲೋಕನಾಥ್ ಮಾತನಾಡಿದರು.

ಮೈಸೂರು ವಿವಿ ನಿಲಯದ ಪ್ರಾಧ್ಯಾಪಕ ಡಾ.ಸಿ.ಡಿ.ಪರಶುರಾಮ್, ಆಂದೋಲನ ಪ್ರತಿನಿಧಿ
ಕೆ.ಟಿ.ಮೋಹನ್ ಕುಮಾರ್, ದಿವ್ಯ ಜ್ಯೋತಿ ರವಿ, ಗೋಪಿ,
ಇಂದ್ರಕುಮಾರ್, ಪಳನಿ, ಲೀಲಾವತಿ, ಚಂದ್ರಶೇಖರಯ್ಯ, ಮಾರುತಿ, ರಾಮ್ ಜಿಂಗ್ ಸೇರಿದಂತೆ ಹಲವರನ್ನು ಸನ್ಮಾನಿಸಲಾಯಿತು.

ಕಾರ್ಯಕ್ರಮದಲ್ಲಿ ತಾಲೂಕು ಕಸಾಪ ಪ್ರಧಾನ ಕಾರ್ಯದರ್ಶಿ
ಕೆ.ಸಿ.ಮಹದೇವ್, ಗ್ರಾಮ ಪಂಚಾಯತಿ ಅಧ್ಯಕ್ಷೆ ಫಾತಿಮಾ, ಉಪಾಧ್ಯಕ್ಷೆ ಶಶಿಕಲಾ, ಮಾಜಿ ಅಧ್ಯಕ್ಷ ಎಸ್.ಆರ್.ದಿನೇಶ್, ಎಸ್.ಆರ್.ಪ್ರಕಾಶ್, ಮಾಜಿ ಉಪಾಧ್ಯಕ್ಷರಾದ ಸುಧಾ ರೇವಣ್ಣ, ಸುಮಾ ಶಿವಕುಮಾರ್, ಸದಸ್ಯ ಗಂಗಾಧರ, ತಾಲೂಕು ರೈತ ಸಂಘದ ಅಧ್ಯಕ್ಷ ಎಸ್.ಬಿ.ಶೇಖರ್, ವಿ ಎಸ್ ಎಸ್ ಬಿ ಎನ್ ಮಾಜಿ ಅಧ್ಯಕ್ಷ ಪಾಪಣ್ಣ, ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಕುಮಾರ್, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ತಾಲೂಕು ಯೋಜನಾಧಿಕಾರಿ ಉಮೇಶ್ ಪೂಜಾರಿ, ಮುಖಂಡರುಗಳಾದ ಪ್ರೇಮ್ ಕುಮಾರ್ ಜೈನ್, ಪೂರ್ಣಚಂದ್ರಗೌಡ, ಜೈನ ಸಮುದಾಯದ ಮುಖಂಡ ರಾಜಣ್ಣ, ಪ್ರದೀಪ್, ಶಿವರಾಜ್, ಗ್ರಂಥಪಾಲಕಿ ದಿವ್ಯ ಸೇರಿದಂತೆ ಇತರರು ಉಪಸ್ಥಿತರಿದ್ದರು.




Leave a Reply

Your email address will not be published. Required fields are marked *

error: Content is protected !!