ಪ್ರಿಯಾಮಣಿಗೆ ಬೆತ್ತಲೆ ಫೋಟೋ ಕೇಳಿದ…

520

ಪ್ರಜಾಸ್ತ್ರ ಸಿನಿಮಾ ಡೆಸ್ಕ್

ಸೌಥ್ ಸಿನಿ ದುನಿಯಾದಲ್ಲಿ ನಟಿ ಪ್ರಿಯಾಮಣಿ ಫುಲ್ ಬ್ಯುಸಿ. ಕನ್ನಡ, ತೆಲುಗು, ತಮಿಳು ಸೇರಿದಂತೆ ಹಲವು ಭಾಷೆಗಳಲ್ಲಿ ನಟಿಸಿ ಬಹುಭಾಷಾ ನಟಿಯಾಗಿದ್ದಾರೆ. ಮದುವೆ ಬಳಿಕ ಯಾವುದೇ ಸಿನಿಮಾದಲ್ಲಿ ಕಾಣಿಸಿಕೊಳ್ಳದೆ ಇದ್ರೂ, ರಿಯಾಲಿಟಿ ಶೋಗಳ ಜಡ್ಜ್ ಆಗಿ, ವೆಬ್ ಸಿರೀಸ್ ಗಳಲ್ಲಿ ತೊಡಗಿಸಿಕೊಂಡಿದ್ದಾರೆ.

ಇತ್ತೀಚೆಗೆ ಪ್ರಿಯಾಮಣಿ ಫೋಟೋಶೂಟ್ ನಡೆಸಿದ್ದಾರೆ. ಅದನ್ನು ಇನ್ಸ್ಟಾದಲ್ಲಿ ಅಪ್ಲೋಡ್ ಮಾಡಿದ್ದಾರೆ. ಇದಕ್ಕೆ ಒಬ್ಬ ಕಾಮೆಂಟ್ ಮಾಡಿ, ನಿಮ್ಮ ಬೆತ್ತಲೆ ಫೋಟೋ ಅಪ್ಲೋಡ್ ಮಾಡಿ ಎಂದಿದ್ದಾನೆ. ಇದಕ್ಕೆ ಉತ್ತರಿಸಿದ ನಟಿ, ಮೊದ್ಲು ನಿಮ್ಮ ತಾಯಿ ಹಾಗೂ ಸಹೋದರಿಗೆ ಕೇಳು. ಅವರು ಪೋಸ್ಟ್ ಮಾಡಿದ್ರೆ ನಾನು ಖಂಡಿತ ಮಾಡುತ್ತೇನೆ ಎಂದಿದ್ದಾರೆ.

ನಟಿ ಉತ್ತರದಿಂದ ಕಂಗಾಲಾದ ಆತ ಸ್ವಾರಿ ಮೇಡಂ ಎಂದಿದ್ದಾನೆ. ನಟಿ ಪ್ರಿಯಾಮಣಿ ಉತ್ತರಕ್ಕೆ ಸಾಕಷ್ಟು ಜನ ಮೆಚ್ಚುಗೆ ವ್ಯಕ್ತಪಡಿಸಿದ್ದು, ಕೆಟ್ಟದಾಗಿ ಕಾಮೆಂಟ್ ಮಾಡಿದವನಿಗೆ ಮಂಗಳಾರತಿ ಎತ್ತಿದ್ದಾರೆ.




Leave a Reply

Your email address will not be published. Required fields are marked *

error: Content is protected !!