ಪ್ರಜಾಸ್ತ್ರ ಸಿನಿಮಾ ಡೆಸ್ಕ್
ನಟಿ ಪ್ರಿಯಾಮಣಿ ಹಾಗೂ ಉದ್ಯಮಿ ಮುಸ್ತಫಾ ದಂಪತಿಯ ನಡುವೆ ಬಿರುಕು ಮೂಡಿದ್ದು, ಡಿವೋರ್ಸ್ ಪಡೆಯುತ್ತಿದ್ದಾರೆ ಅನ್ನೋ ಚರ್ಚೆ ಸೋಷಿಯಲ್ ಮೀಡಿಯಾದಲ್ಲಿ ಜೋರಾಗಿದೆ. ಇದಕ್ಕೆ ನಟಿ ಸ್ಪಷ್ಟನೆ ಕೊಟ್ಟಿದ್ದಾರೆ.
ದಾಂಪತ್ಯ ಜೀವನದಲ್ಲಿ ನಾವು ಸುಖವಾಗಿದ್ದೇವೆ. ವಿಚ್ಛೇದನ ಪಡೆಯುವ ಪ್ರಶ್ನೆಯೇ ಇಲ್ಲವೆಂದು ಹರಿದಾಡುತ್ತಿರುವ ಊಹಾಪೋಹಗಳಿಗೆ ತೆರೆ ಎಳೆದಿದ್ದಾರೆ.