ನಟ ಧನಂಜಯ್ ವಿರುದ್ಧ ಕುತಂತ್ರ!

258

ಪ್ರಜಾಸ್ತ್ರ ಸಿನಿಮಾ ಡೆಸ್ಕ್

ಸ್ಯಾಂಡಲ್ ವುಡ್ ಸೇರಿದಂತೆ ಸೌಥ್ ಸಿನಿ ದುನಿಯಾದಲ್ಲಿ ಮಿಂಚುತ್ತಿರುವ ನಟ ಡಾಲಿ ಧನಂಜಯ್. ಈ ಮೂಲಕ ಕನ್ನಡ ನೆಲದ ಅದ್ಭುತ ನಟ ಯಶಸ್ಸು ಗಳಿಸುತ್ತಿರುವ ಹೊತ್ತಿನಲ್ಲಿ ಕೆಲವರು ಕುತಂತ್ರ ಮಾಡುತ್ತಿದ್ದಾರೆ. ನಟ ಡಾಲಿ ಧನಂಜಯ್ ನಿರ್ಮಾಣ ಹಾಗೂ ನಟನೆಯ ಹೆಡ್ ಬುಷ್ ಚಿತ್ರದ ವಿರುದ್ಧ ದೂರು ದಾಖಲಿಸಲಾಗಿದೆ.

ಚಿತ್ರದಲ್ಲಿ ವೀರಗಾಸೆ ಕಲೆಗೆ ಅವಮಾನ ಮಾಡಲಾಗಿದೆ ಎಂದು ಹೇಳಿ ಸೋಷಿಯಲ್ ಮೀಡಿಯಾದಲ್ಲಿ ವಾಗ್ದಾಳಿ ನಡೆಸಲಾಗುತ್ತಿದೆ. ಅಲ್ಲದೇ ದೂರು ಸಹ ದಾಖಲಿಸಲಾಗಿದೆ. ಈ ಬಗ್ಗೆ ಮೀಡಿಯಾಯೊಂದರಲ್ಲಿ ಮಾತನಾಡಿರುವ ನಟ ಧನಂಜಯ್, ನಾನು ಇಲ್ಲಿ ಇರುವುದೇ ಇಷ್ಟ ಇಲ್ಲ ಅನ್ನಿಸುತ್ತೆ. ಚಿತ್ರರಂಗದಲ್ಲಿ ಇರೋದೋ, ಕರ್ನಾಟಕದಲ್ಲಿ ಇರೋದು ಇಷ್ಟ ಇಲ್ಲ ಅನಿಸುತ್ತೆ. ಪ್ರತಿ ಸಾರಿನೂ ತೊಂದರೆ ಕೊಡುವುದು ಎಷ್ಟು ಸರಿ? ನಮ್ಮವರು ಕೂಡ ಇದನ್ನು ಅರ್ಥ ಮಾಡಿಕೊಳ್ಳಬೇಕು ಎಂದು ನೋವು ತೋಡಿಕೊಂಡಿದ್ದಾರೆ.

ಜೈಲಿಗೆ ಹೋಗಿ ಬಂದವರು, ನಾಲಾಯಕಗಳು, ಕಿಡಿಗೇಡಿಗಳು ನನ್ನ ಬಗ್ಗೆ ಮಾತನಾಡುತ್ತಿದ್ದಾರೆ ಎಂದು ಆಕ್ರೋಶ ಹೊರ ಹಾಕಿದ್ದಾರೆ. ಇನ್ನೊಂದು ಕಡೆ ನಟ ಧನಂಜಯ್ ಪರ ಅನೇಕರು ನಿಂತುಕೊಂಡಿದ್ದಾರೆ.




Leave a Reply

Your email address will not be published. Required fields are marked *

error: Content is protected !!