ಡಾಲಿ ಹುಟ್ಟು ಹಬ್ಬಕ್ಕೆ ಉತ್ತರಕಾಂಡ ಟೀಸರ್.. ಫ್ಯಾನ್ಸ್ ಗೆ ಆಹ್ವಾನ

214

ಪ್ರಜಾಸ್ತ್ರ ಸಿನಿಮಾ ಡೆಸ್ಕ್

ಸ್ಯಾಂಡಲ್ ವುಡ್ ಡಾಲಿ ಧನಂಜಯ್ ಈಗ ಸೌಥ್ ಇಂಡಿಯನ್ ಸ್ಟಾರ್ ಆಗಿದ್ದಾರೆ. ತೆಲುಗು, ತಮಿಳು ಚಿತ್ರಗಳಲ್ಲಿಯೂ ಡಾಲಿ ಮಿಂಚುತ್ತಿದ್ದಾರೆ. ಇದೀಗ ಅವರ ಮತ್ತೊಂದು ಖಡಕ್ ಸಿನಿಮಾ ಉತ್ತರಕಾಂಡ ಹವಾ ಸೃಷ್ಟಿಸಿದೆ. ಡಾಲಿ ಹುಟ್ಟು ಹಬ್ಬಕ್ಕೆ ಟೀಸರ್ ರಿಲೀಸ್ ಮಾಡುವ ಮೂಲಕ ಜನ್ಮ ದಿನ ಆಚರಿಸಿಕೊಳ್ಳಲಿದ್ದಾರೆ.

ಯೆಸ್, ಆಗಸ್ಟ್ 22ರಂದು ನಟ ಧನಂಜಯ್ ಜನ್ಮ ದಿನ. ಅಂದು ಸಂಜೆ 5.30ಕ್ಕೆ ಬೆಂಗಳೂರಿನ ಸಂತೋಷ್ ಥಿಯೇಟರ್ ನಲ್ಲಿ ಉತ್ತರಕಾಂಡ ಟೀಸರ್ ರಿಲೀಸ್ ಆಗುತ್ತಿದೆ. ಅಲ್ಲಿಗೆ ಬರಲು ಅಭಿಮಾನಿಗಳಿಗೆ ಹೇಳಿದ್ದಾರೆ. ಇಲ್ಲಿಗೆ ಬರದೆ ಇರುವವರು ಹೊಸಕೆರೆಹಳ್ಳಿಯಲ್ಲಿರುವ ನಂದಿ ಲಿಂಕ್ಸ್ ಗ್ರೌಂಡ್ ಆಹ್ವಾನಿಸಿದ್ದಾರೆ.

ರಾತ್ರಿ 11ಗಂಟೆಯಿಂದಲೇ ಹುಟ್ಟು ಹಬ್ಬವನ್ನು ಆಚರಿಸೋಣ. ಆದರೆ, ನೀವು ಬರುವಾಗ ಕೇಕ್, ಹಾರ ತರುವುದು ಬೇಡ ಎಂದಿದ್ದಾರೆ. ಕೋವಿಡ್ ಸೇರಿ ಬೇರೆ ಬೇರೆ ಕಾರಣಕ್ಕೆ ಅಭಿಮಾನಿಗಳೊಂದಿಗೆ ಡಾಲಿ ಹುಟ್ಟು ಹಬ್ಬವನ್ನು ಕಳೆದ ಮೂರ್ನಾಲ್ಕು ವರ್ಷಗಳಿಂದ ಆಚರಿಸಿಕೊಂಡಿಲ್ಲ. ಈ ಬಾರಿ ಫ್ಯಾನ್ಸ್ ಜೊತೆಗೆ ಭರ್ಜತಿ ಬರ್ಥ್ ಡೇಗೆ ಪ್ಲಾನ್ ಮಾಡಿದ್ದಾರೆ.




Leave a Reply

Your email address will not be published. Required fields are marked *

error: Content is protected !!