Search

ಡಾಲಿ ಪರ ನಿಂತ ಕರ್ನಾಟಕದ ಜನತೆ

330

ಪ್ರಜಾಸ್ತ್ರ ಸುದ್ದಿ

ಬೆಂಗಳೂರು: ನಟ ಡಾಲಿ ಧನಂಜಯ್ ನಿರ್ಮಾಣ ಹಾಗೂ ನಟನೆಯ ಹೆಡ್ ಬುಷ್ ಚಿತ್ರದ ವಿರುದ್ಧ ಕೆಲವರು ನಡೆಸಿರುವ ಷಡ್ಯಂತ್ರದ ವಿರುದ್ಧ ಇಡೀ ಕರ್ನಾಟಕದ ಜನತೆ ನಿಂತುಕೊಂಡಿದೆ. ಹೆಡ್ ಬುಷ್ ಚಿತ್ರದ ಸಕ್ಸಸ್ ಸಹಿಸದ ಕೆಲವು ಕಿಡಿಗೇಡಿಗಳ ಹಬ್ಬಿಸುತ್ತಿರುವ ವಿವಾದದ ವಿರುದ್ಧ ಜನತೆ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ಒಂದು ಕಡೆ ವೀರಗಾಸೆ ಪರಂಪರೆಗೆ ಅವಮಾನ ಮಾಡಲಾಗಿದೆ ಎಂದು, ಮತ್ತೊಂದು ಕಡೆ ಕರಗ ಪರಂಪರೆಗೆ ಅವಮಾನ ಮಾಡಲಾಗಿದೆ ಎಂದು ಹೇಳುವ ಮೂಲಕ ಕೆಲ ಹಿಂದೂ ಸಂಘಟನೆಗಳು ಪ್ರತಿಭಟನೆ, ದೂರು ನೀಡುವುದು ಮಾಡುತ್ತಿವೆ. ಇದಕ್ಕೆ ಕನ್ನಡಿಗರು ಸರಿಯಾಗಿಯೇ ಉತ್ತರ ನೀಡುತ್ತಿದ್ದು, ನಾವು ಧನಂಜಯ್ ಪರ ಎನ್ನುತ್ತಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ಐ ಸ್ಯಾಂಡ್ ವಿತ್ ಧನಂಜಯ್ ಎಂದು ಅಭಿಯಾನ ನಡೆಸಲಾಗುತ್ತಿದೆ.




Leave a Reply

Your email address will not be published. Required fields are marked *

error: Content is protected !!