ಚಂದ್ರಯಾನ-3: ಲ್ಯಾಂಡ್ ಆಗುವ ದಿನ, ಸಮಯ ಇಲ್ಲಿದೆ

384

ಪ್ರಜಾಸ್ತ್ರ ವಿಜ್ಞಾನ ಮತ್ತು ತಂತ್ರಜ್ಞಾನ

ಭಾರತೀಯರೆಲ್ಲ ಕುತೂಹಲದಿಂದ ಕಾಯುತ್ತಿರುವ ಕ್ಷಣ ಹತ್ತಿರವಾಗುತ್ತಿದೆ. ಚಂದ್ರಯಾನ-3 ಲ್ಯಾಂಡ್ ಆಗುವ ದಿನ, ಸಮಯದ ಬಗ್ಗೆ ಇಸ್ರೋ ಮಾಹಿತಿ ನೀಡಿದೆ. ಚಂದ್ರನ ದಕ್ಷಿಣ ಧ್ರುವದ ಅಂಗಳಕ್ಕೆ ಆಗಸ್ಟ್ 23ರ ಸಂಜೆ 6 ಗಂಟೆ 4 ನಿಮಿಷಕ್ಕೆ ಇಳಿಯಲಿದೆ.

ಈ ಕುರಿತು ಇಸ್ಟ್ರೋ ಭಾನುವಾರ ಟ್ವೀಟ್ ಮಾಡುವ ಮೂಲಕ ಮಾಹಿತಿ ಹಂಚಿಕೊಂಡಿದೆ. ಚಂದ್ರಯಾನ-3 ನೌಕೆಯ ಲ್ಯಾಂಡರ್ ಹಾಗೂ ರೋವರ್ ಇರುವ ಘಟಕದ ವೇಗ ತಗ್ಗಿಸುವ ಕೆಲಸ ಭಾನುವಾರ ಯಶಸ್ವಿಯಾಗಿ ಆಗಿದೆ. ಚಂದ್ರನಿಂದ 123 ಕಿಲೋ ಮೀಟರ್ ದರ ಕಕ್ಷೆಯನ್ನು ತಲುಪಲಿದೆ. ಸಕಾರಾತ್ಮಕ ಹಾರೈಕೆ ಹೊಂದಿದ ಪ್ರತಿಯೊಬ್ಬರಿಗೂ ಧನ್ಯವಾದಗಳು ಎಂದು ತಿಳಿಸಲಾಗಿದೆ.

ಇಸ್ರೋ ಈ ಹಿಂದೆ ಚಂದ್ರಯಾನವನ್ನು ಎರಡು ಬಾರಿ ಪ್ರಯತ್ನಿಸಿ ವಿಫಲ ಹೊಂದಿದೆ. ಇದೀಗ ಯಶಸ್ವಿಯಾಗುವ ಕ್ಷಣ ಸನೀಹವಾಗಿದೆ. ಕೋಟ್ಯಾಂತರ ಭಾರತೀಯರ ಕನಸು ನನಸಾಗುವ ಸಮಯವನ್ನು ಎಲ್ಲರೂ ಎದುರು ನೋಡಲು ಕಾಯುತ್ತಿದ್ದಾರೆ.




Leave a Reply

Your email address will not be published. Required fields are marked *

error: Content is protected !!