‘ನಮ್ಮನ್ನು ತುಳಿಯಲು ನೋಡುತ್ತಿದ್ದಾರೆ’

264

ಪ್ರಜಾಸ್ತ್ರ ಸಿನಿಮಾ ಡೆಸ್ಕ್

ಡಾಲಿ ಧನಂಜಯ್ ನಿರ್ಮಾಣದ 2ನೇ ಚಿತ್ರ ಹೆಡ್ ಬುಷ್ ಅಕ್ಟೋಬರ್ 21ರಂದು ರಿಲೀಸ್ ಆಗಿ ಭರ್ಜರಿ ಓಪನಿಂಗ್ ಕಂಡಿದೆ. ಈ ಬಗ್ಗೆ ಎಲ್ಲ ರೀತಿಯ ಪ್ರತಿಕ್ರಿಯೆಗಳು ಬರುತ್ತಿವೆ. ಚಿತ್ರದ ಬಗ್ಗೆ ಅಭಿಮಾನಿಗಳು, ಸಿನಿ ರಸಿಕರು ತೋರಿಸುತ್ತಿರುವ ಪ್ರೀತಿಗೆ ನಟ ಡಾಲಿ ಧನಂಜಯ್ ಹಾಗೂ ಲೂಸ್ ಮಾದ ಯೋಗಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಇದೆ ವೇಳೆ ನಮ್ಮನ್ನು ತುಳಿಯಲು ನೋಡುತ್ತಿದ್ದಾರೆ. ನಮ್ಮ ವಿರುದ್ಧ ಪಿತೂರಿ ನಡೆಸಲಾಗುತ್ತಿದೆ ಎಂದು ಪರೋಕ್ಷವಾಗಿ ಹೇಳಿದರು. ಆದರೆ, ಜನರು ನಮ್ಮನ್ನು ಎರಡನೇ ಬಾರಿಗೂ ನಂಬಿದ್ದಾರೆ. ನೆಗೆಟಿವ್ ಬಗ್ಗೆ ತಲೆ ಕೆಡಿಸಿಕೊಳ್ಳುವುದಿಲ್ಲವೆಂದು ಇಬ್ಬರು ನಟರು ಹೇಳಿದ್ದಾರೆ.

ನಟ ಡಾಲಿ ಧನಂಜಯ್ ಬೆಂಗಳೂರಿನ ಡಾನ್ ಜಯರಾಜ್ ಕುರಿತು ಸಿನಿಮಾ ಮಾಡಿದ್ದು, ಸ್ವತಃ ಧನಂಜಯ್ ಜಯರಾಜ್ ಪಾತ್ರ ಮಾಡಿದ್ದಾರೆ. ನಟ ಯೋಗಿ ಗಂಗಾ ಪಾತ್ರ ಮಾಡಿದ್ದಾರೆ. ಈ ಮೂಲಕ ರಗಡ್ ಲುಕ್ ನಲ್ಲಿ ಇಬ್ಬರು ಕಾಣಿಸಿಕೊಂಡಿದ್ದಾರೆ.




Leave a Reply

Your email address will not be published. Required fields are marked *

error: Content is protected !!