ಹೆಡ್ ಬುಷ್ ತಂಡ ಸೇರಿದ ರಘು ಮುಖರ್ಜಿ

221

ಪ್ರಜಾಸ್ತ್ರ ಸಿನಿಮಾ ಡೆಸ್ಕ್

ಡಾಲಿ ಧನಂಜಯ್ ನಟನೆಯ ಹೆಡ್ ಬುಷ್ ಚಿತ್ರದಲ್ಲಿ ನಟ ರಘು ಮುಖರ್ಜಿ ಕಾಣಿಸಿಕೊಳ್ಳುತ್ತಿದ್ದಾರೆ. ಈ ಬಗ್ಗೆ ಚಿತ್ರತಂಡ ಅನೌನ್ಸ್ ಮಾಡಿದೆ. ಹೀಗೆ ಒಬ್ಬೊಬ್ಬರ ಎಂಟ್ರಿಯ ಬಗ್ಗೆ ಹೆಡ್ ಬುಷ್ ಟೀಂ ಫೋಟೋ ಬಿಡುಗಡೆ ಮಾಡುತ್ತಾ ಬರುತ್ತಿದೆ.

ಈಗಾಗ್ಲೇ ಶ್ರುತಿ ಹರಿಹರನ್, ವಸಿಷ್ಠ್ ಸಿಂಹ, ಲೂಸ್ ಮಾದ ಯೋಗಿ, ಬಾಲು ನಾಗೇಂದ್ರ ಹೀಗೆ ಅನೇಕರ ಎಂಟ್ರಿಯಾಗಿದೆ. ಕಥೆ, ಚಿತ್ರಕಥೆ ಅಗ್ನಿ ಶ್ರೀಧರ್ ಬರೆದಿದ್ದಾರೆ. ಶೂನ್ಯ ನಿರ್ದೇಶನ ಮಾಡುತ್ತಿದ್ದಾರೆ. ಡಾಲಿ ಧನಂಜಯ್, ರಮ್ಕೋ ಸೋಮಣ್ಣ ನಿರ್ಮಾಣ ಮಾಡುತ್ತಿದ್ದಾರೆ.

ಡಾಲಿ ಫಿಚ್ಚರ್ ಹಾಗೂ ಸೋಮಣ್ಣ ಟಾಕೀಸ್ ಜಂಟಿಯಾಗಿ ಸಿನಿಮಾ ತಯಾರು ಮಾಡುತ್ತಿವೆ. ಒಂದು ಕಾಲದಲ್ಲಿ ಇಡೀ ಬೆಂಗಳೂರು ಭೂಗತ ಜಗತ್ತನ್ನು ಆಳಿದ ಜಯರಾಜ್ ಜೀವನಾಧರಿತ ಚಿತ್ರವಾಗಿದೆ. ಮೊದಲ ಭಾಗದ ಚಿತ್ರೀಕರಣ ನಡೆಯುತ್ತಿದೆ.




Leave a Reply

Your email address will not be published. Required fields are marked *

error: Content is protected !!