ಸಿಂದಗಿಯಲ್ಲಿ ಭರ್ಜರಿ ಮಳೆ

478

ಪ್ರಜಾಸ್ತ್ರ ಸುದ್ದಿ

ಸಿಂದಗಿ: ವಿಜಯಪುರ ಜಿಲ್ಲೆ ಸಿಂದಗಿ ತಾಲೂಕಿನಾದ್ಯಂತ ಗುರುವಾರ ಸಂಜೆ ಭರ್ಜರಿ ಮಳೆಯಾಗುತ್ತಿದೆ. ಅಸಾನಿ ಚೆಂಡಮಾರುತದ ಎಫೆಕ್ಟ್ ಭರ್ಜರಿಯಾಗಿದೆ.

ಕಳೆದ ಎರಡು ದಿನಗಳಿಂದ ಮೋಡ ಮುಸುಕಿದ‌ ವಾತಾವರಣವಿತ್ತು. ಹೀಗಾಗಿ ಬಿಸಿಲು ಸಂಪೂರ್ಣ ಕಡಿಮೆಯಾಗಿತ್ತು. ಬುಧವಾರ ರಾತ್ರಿ ತುಂತುರು ಮಳೆಯಾಗಿತ್ತು. ಗುರುವಾರ ಸಂಜೆ ಭರ್ಜರಿಯಾಗಿ ಮಳೆಯಾಗುತ್ತಿದೆ.

ತಗ್ಗು ಪ್ರದೇಶ ಸೇರಿದಂತೆ ಬಹುತೇಕ ಕಡೆ ಮಳೆ ನೀರು ನುಗ್ಗಿದೆ. ಇದರಿಂದಾಗಿ ಸಾರ್ವಜನಿಕರು ಮಳೆ ನೀರು ಹೊರ ಹಾಕಲು ಹರಸಾಹಸ ಪಡುತ್ತಿದ್ದಾರೆ. ಸುಮಾರು ಒಂದು ಗಂಟೆಗೂ ಹೆಚ್ಚು ಕಾಲ ಮಳೆ ಸುರಿಯುತ್ತಿದೆ.




Leave a Reply

Your email address will not be published. Required fields are marked *

error: Content is protected !!