1 ಕ್ಲಾಸ್.. 1 ಬೋರ್ಡ್.. 2 ವಿಷಯ.. 3 ಶಿಕ್ಷಕರು

528

ಪ್ರಜಾಸ್ತ್ರ ಸುದ್ದಿ

ಬಿಹಾರ್: ಸೋಷಿಯಲ್ ಮೀಡಿಯಾದಲ್ಲಿ ವಿಡಿಯೋವೊಂದು ವೈರಲ್ ಆಗಿದೆ. ಅದೇನು ಅಂದರೆ, ಒಂದು ಕ್ಲಾಸ್ ರೂಮಿನ ಒಂದು ಬೋರ್ಡ್ ನಲ್ಲಿ ಎರಡು ವಿಷಯವನ್ನು ಇಬ್ಬರು ಶಿಕ್ಷಕರು ಹೇಳುತ್ತಿದ್ದಾರೆ. ಮತ್ತೊಬ್ಬರು ಶಿಕ್ಷಕರು ಕುಳಿತುಕೊಂಡಿದ್ದಾರೆ. ಇಂತಹ ಸ್ಥಿತಿ ಇರುವುದು ಬಿಹಾರದ ಕಟಿಹಾರದಲ್ಲಿ.

ಅರ್ಧ ಬೋರ್ಡ್ ನಲ್ಲಿ ಹಿಂದಿ, ಅರ್ಧ ಬೋರ್ಡ್ ನಲ್ಲಿ ಉರ್ದು ಕಲಿಸಿಕೊಡಲಾಗುತ್ತಿದೆ. ಇನ್ನೊಬ್ಬರು ಟೀಚರ್ ಮಕ್ಕಳನ್ನು ಕಂಟ್ರೋಲ್ ಮಾಡಲು ನೋಡುತ್ತಾರೆ. ಇಂತಹ ದಹನೀಯ ಸ್ಥಿತಿಯಲ್ಲಿ ಇಲ್ಲಿನ ಶಾಲೆಗಳಿವೆ. 2017ರಲ್ಲಿ ಉರ್ದು ಪ್ರಾಥಮಿಕ ಶಾಲೆಯನ್ನು ಇಲ್ಲಿಗೆ ಸ್ಥಳಾಂತರಿಸಲಾಗಿದೆ. ಆದರೆ, ಕ್ಲಾಸ್ ರೂಮು ಇಲ್ಲ ಅಂದರೆ ಆದರ್ಶ ಮಧ್ಯಮ ಶಾಲೆಯ ಸಹಾಯ ಶಕ್ಷಕಿ ಕುಮಾರಿ ಪ್ರಿಯಾಂಕಾ.

ಇಂತಹ ಸ್ಥಿತಿಯಲ್ಲಿ ಮಕ್ಕಳು ಪಾಠ ಕಲಿಯುವುದು ಹೇಗೆ? ಶಿಕ್ಷಕರು ಪಾಠ ಮಾಡುವುದು ಹೇಗೆ? ರಾಜಕಾರಣಿಗಳು, ಅಧಿಕಾರಿಗಳು ಸರ್ಕಾರಿ ಶಾಲೆಗಳ ಬಗ್ಗೆ ಎಷ್ಟೊಂದು ತಾತ್ಸಾರ ಹೊಂದಿದ್ದಾರೆ ಅನ್ನೋದಕ್ಕೆ ಉತ್ತಮ ಸಾಕ್ಷಿ ಇದು.




Leave a Reply

Your email address will not be published. Required fields are marked *

error: Content is protected !!