ಗದಗಿನಲ್ಲಿ ಹಿಟ್ ಅಂಡ್ ರನ್ ಕೇಸ್: ಹೆಡ್ ಕಾನ್ಸ್ ಟೇಬಲ್ ನಿಧನ

256

ಪ್ರಜಾಸ್ತ್ರ ಸುದ್ದಿ

ಗದಗ: ಹಿಟ್ ಅಂಡ್ ರನ್ ಪ್ರಕರಣದಲ್ಲಿ ಪೊಲೀಸ್ ಹೆಡ್ ಕಾನ್ಸ್ ಟೇಬಲ್ ವೊಬ್ಬರು ನಿಧನರಾದ ಘಟನೆ ಭಾನುವಾರ ನಡೆದಿದೆ. ಮುಂಡರಗಿ ತಾಲೂಕಿನ ಬರದೂರ ಹತ್ತಿರ ಈ ಒಂದು ಘಟನೆ ಸಂಭವಿಸಿದೆ. ಕೊಟ್ರಪ್ಪ ಮೃತ ಹೆಡ್ ಕಾನ್ಸ್ ಟೇಬಲ್.

ಡೋಣಿ ಗ್ರಾಮಕ್ಕೆ ಬಂದೋಬಸ್ತಿ ಸಲುವಾಗಿ ಕೊಟ್ರೆಪ್ಪ ಭಂಡಗಾರ ಹೊರಟಿದ್ದರು. ಈ ವೇಳೆ ಹಿಟ್ ಅಂಡ್ ರನ್ ಪ್ರಕರಣ ನಡೆದಿದೆ. ಇವರಿಗೆ ಡಿಕ್ಕಿಯಾಗಿ ಎಸ್ಕೇಪ್ ಆಗಿರುವ ವಾಹನ ಯಾವುದು? ಏನು ಅನ್ನೋದರ ಕುರಿತು ಮುಂಡರಗಿ ಪೊಲೀಸ್ ಠಾಣೆ ಅಧಿಕಾರಿಗಳು ತನಿಖೆ ನಡೆಸಿದ್ದಾರೆ.




Leave a Reply

Your email address will not be published. Required fields are marked *

error: Content is protected !!