ಹನಿಟ್ರ್ಯಾಪ್ ಪ್ರಕರಣದಲ್ಲಿ ಇಬ್ಬರ ಬಂಧನ

292

ಪ್ರಜಾಸ್ತ್ರ ಅಪರಾಧ ಸುದ್ದಿ

ಮಂಗಳೂರು: ಹನಿಟ್ರ್ಯಾಪ್ ಪ್ರಕರಣ ಸಂಬಂಧ ಓರ್ವ ಯವತಿ ಸೇರಿದಂತೆ ಇಬ್ಬರನ್ನ ಬಂಧಿಸಲಾಗಿದೆ. ಸಫ್ನಾ ಅಲಿಯಾಸ್ ಹತೀಜಮ್ಮ(23) ಅನ್ನೋ ಯುವತಿ ಹಾಗೂ ಅಝ್ವೀನ್(24) ಅನ್ನೋ ಇಬ್ಬರನ್ನ ಬಂಧಿಸಿ ಜೈಲಿಗೆ ಕಳುಹಿಸಲಾಗಿದೆ.

ಜೋಕಟ್ಟೆ ನಿವಾಸಿ ಸಫ್ನಾ ಉಳ್ಳಾದ ಸಂತ್ರಸ್ತನನ್ನ ಪರಿಚಯ ಮಾಡಿಕೊಂಡಿದ್ದಳು. ಒಂದು ದಿನ ಅವನ ಮನೆಯಲ್ಲಿ ಪಾರ್ಟಿ ಮಾಡಿದ್ದಳು. ಆ ವೇಳೆ ಮತ್ತು ಬರುವ ಔಷಧಿ ಹಾಕಿಸಿ ಪ್ರಜ್ಞೆ ತಪ್ಪಿಸಿ ಮನೆಯಲ್ಲಿದ್ದ 2.12 ಲಕ್ಷ ರೂಪಾಯಿ ಹಾಗೂ ಉಂಗುರ ಕಳ್ಳತನ ಮಾಡಿ ಪರಾರಿಯಾಗಿದ್ರು.

ಸಂತ್ರಸ್ತನ ನಗ್ನ ಫೋಟೋ ಹಾಗೂ ವಿಡಿಯೋ ಇಟ್ಟುಕೊಂಡು ಬ್ಲಾಕ್ ಮೇಲ್ ಮಾಡ್ತಿದ್ರು ಎನ್ನಲಾಗ್ತಿದೆ. ಈ ಸಂಬಂಧ ಉಳ್ಳಾಲ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಇದರ ತನಿಖೆ ನಡೆಸಿದ ಪೊಲೀಸರು ಸಫ್ನಾ ಹಾಗೂ ಅಝ್ವೀನ್ ನನ್ನ ಬಂಧಿಸಿದ್ದಾರೆ.




Leave a Reply

Your email address will not be published. Required fields are marked *

error: Content is protected !!