ಹು-ಧಾ ಲೋಕಲ್ ಫೈಟ್: ಕಿಂಗ್ ಮೇಕರ್ ಆದ ಪಕ್ಷೇತರರು

263

ಪ್ರಜಾಸ್ತ್ರ ಸುದ್ದಿ

ಹುಬ್ಬಳ್ಳಿ/ಧಾರವಾಡ: ಸೆಪ್ಟೆಂಬರ್ 3ರಂದು ನಡೆದಿದ್ದ ಮಹಾನಗರ ಪಾಲಿಕೆ 82 ವಾರ್ಡ್ ಗಳ ಚುನಾವಣೆಯ ಫಲಿತಾಂಶ ಇಂದು ಹೊರ ಬಿದ್ದಿದೆ. ಯಾವುದೇ ಪಕ್ಷಕ್ಕೆ ಸ್ಪಷ್ಟ ಬಹುಮತ ಸಿಕ್ಕಿಲ್ಲ. ಹೀಗಾಗಿ ಇಲ್ಲಿ ಪಕ್ಷೇತರರ ಪಾತ್ರ ನಿರ್ಣಾಯಕವಾಗಿದೆ.

82 ವಾರ್ಡ್ ಗಳಲ್ಲಿ ಬಿಜೆಪಿ 39, ಕಾಂಗ್ರೆಸ್ 33, ಪಕ್ಷೇತರರು 6, ಎಐಎಂಐಎಂ 3, ಜೆಡಿಎಸ್ 1 ವಾರ್ಡ್ ಗಳಲ್ಲಿ ಗೆಲುವು ಸಾಧಿಸಿವೆ. ಹೀಗಾಗಿ ಮ್ಯಾಜಿಕ್ ನಂಬರ್ 45 ಅನ್ನು ಯಾವುದೇ ಪಕ್ಷ ತಲುಪಿಲ್ಲ. ಇನ್ನು ವಿಶೇಷ ಮತದಾನದ ಹಕ್ಕು ಹೊಂದಿರುವ ಐವರು ಬಿಜೆಪಿ ಪ್ರತಿನಿಧಿಗಳಿದ್ದಾರೆ. ಕಾಂಗ್ರೆಸ್ ಗೆ ಮೂವರು ಪ್ರತಿನಿಧಿಗಳಿದ್ದಾರೆ.

ಬಿಜೆಪಿ ವಾರ್ಡ್ ಸದಸ್ಯರು, ವಿಶೇಷ ಅಧಿಕಾರಿ ಹೊಂದಿರುವ ಐವರು ಪ್ರತಿನಿಧಿಗಳು ಸೇರಿದರೆ ಬಿಜೆಪಿ 44 ಸ್ಥಾನಗಳನ್ನು ಹೊಂದುವ ಮೂಲಕ ಮೇಯರ್ ಸ್ಥಾನ ಪಡೆಯಲು ಒಬ್ಬರ ಬೆಂಬಲ ಬೇಕು. ಇದು ಕಷ್ಟವಾಗದು. ಕಾಂಗ್ರೆಸ್ ಗೆ 9 ಸ್ಥಾನ ಬೇಕು. ಆಗ 6 ಜನ ಪಕ್ಷೇತರರು, 3 ಎಐಎಂಐಎಂ ಸದಸ್ಯರ ಬೆಂಬಲ ಬೇಕಾಗುತ್ತೆ. ಹೀಗಾಗಿ ಮೇಯರ್ ಪಟ್ಟ ಯಾರಿಗೆ ಅನ್ನೋ ಕುತೂಹಲವಿದೆ.




Leave a Reply

Your email address will not be published. Required fields are marked *

error: Content is protected !!