ಎಂಇಎಸ್ ಗರ್ವಭಂಗ.. ಕುಂದಾನಗರಿ ಪಾಲಿಕೆ ಬಿಜೆಪಿ ತೆಕ್ಕೆಗೆ..

256

ಪ್ರಜಾಸ್ತ್ರ ಸುದ್ದಿ

ಬೆಳಗಾವಿ: ಸಾಕಷ್ಟು ಜಿದ್ದಾಜಿದ್ದಿನಿಂದ ಕೂಡಿದ್ದ ಬೆಳಗಾವಿ ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಬಿಜೆಪಿ ಇತಿಹಾಸ ಬರೆದಿದ್ದು, 1984ರ ಬಳಿಕ ಬಿಜೆಪಿ ಅಧಿಕಾರದ ಚುಕ್ಕಾಣಿ ಹಿಡಿಯುತ್ತಿದೆ. ಈ ಮೂಲಕ ಎಂಇಎಸ್ ಪುಂಡಾಟಿಕೆ ರಾಜಕೀಯಕ್ಕೆ ಬ್ರೇಕ್ ಹಾಕಲಾಗಿದೆ.

58 ವಾರ್ಡ್ ಗಳಲ್ಲಿ 54ರಲ್ಲಿ ಮಾತ್ರ ಸ್ಪರ್ಧಿಸಿದ್ದ ಬಿಜೆಪಿ 36 ಕಡೆ ಗೆದ್ದಿದೆ. ಈ ಮೂಲಕ ಮ್ಯಾಜಿಕ್ ನಂಬರ್ 30 ಅನ್ನು ದಾಟಿ ಮುಂದೆ ಹೋಗಿದೆ. ಕಳೆದ ಬಾರಿ 30 ಸ್ಥಾನ ಗೆದ್ದಿದ್ದ ಎಂಇಎಸ್ ಈ ಬಾರಿ ಕೇವಲ 2 ಸ್ಥಾನ ಗೆದ್ದಿದೆ. ಇದರೊಂದಿಗೆ ಭಾಷೆ, ಗಡಿ ರಾಜಕೀಯ ಮಾಡುತ್ತಿದ್ದ ಎಂಇಸಿ ಪಡೆಗೆ ಗರ್ವಭಂಗವಾಗಿದೆ. ಇನ್ನು ವಿಧಾನಸಭೆ ಚುನಾವಣೆಯಲ್ಲಿ ಐವರು ಎಂಇಎಸ್ ಶಾಸಕರು ಗೆಲ್ಲುತ್ತಿದ್ದರು. ಕಳೆದ ಬಾರಿ ಒಬ್ಬರೂ ಗೆದ್ದಿಲ್ಲ ಅನ್ನೋದು ಗಮನಿಸಬೇಕು.




Leave a Reply

Your email address will not be published. Required fields are marked *

error: Content is protected !!