ವೃದ್ಧ ದಂಪತಿಗೆ ಸಹಾಯ ಹಸ್ತ ಚಾಚಿದ ತಹಶೀಲ್ದಾರ್

2671

ಪ್ರಜಾಸ್ತ್ರ ಒಳ್ಳೆಯ ಸುದ್ದಿ

ನಾಗಮಂಗಲ: ಮಕ್ಕಳಿಂದ ಮನೆಯಿಂದ ಹೊರನೂಕಿಸಿಕೊಂಡ ವೃದ್ಧ ದಂಪತಿ ಜೀವನೋಪಾಯಕ್ಕೆ ತಹಶೀಲ್ದಾರ್ ಕುಂಞಿ ಅಹಮದ್ ಅವರು ವೈಯಕ್ತಿಕ ಧನಸಹಾಯ ಮಾಡಿ ಮಾನವೀಯತೆ ತೋರಿಸಿದ್ದಾರೆ.

ತಾಲೂಕಿನ ಕಸಬಾ ಹೋಬಳಿಯ ತುಪ್ಪದ ಮಡು ಗ್ರಾಮದ ನಿವಾಸಿಗಳಾದ ಗವಿಗೌಡ ಎಂಬುವರ ಪತ್ನಿ ನರಸಮ್ಮ ಶಾಲೆಯೊಂದರಲ್ಲಿ ಅಡುಗೆ ಸಹಾಯಕಿಯಾಗಿ ಕೆಲಸ ಮಾಡುತ್ತಿದ್ರು. ಕರೋನಾ ಹಿನ್ನೆಲೆಯಲ್ಲಿ ಶಾಲಾ-ಕಾಲೇಜು ಆರಂಭವಾಗದೆ ಕೆಲಸವಿಲ್ಲದೆ ಮನೆಯಲ್ಲಿ ಉಳಿದ್ರು.

ಇದ್ರಿಂದಾಗಿ ಒಪ್ಪತ್ತಿನ ಊಟಕ್ಕೂ ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದ್ದು, ವೃದ್ಯಾಪ್ಯ ವೇತನಕ್ಕೆ ಅರ್ಜಿ ಸಲ್ಲಿಸಲು ತಾಲೂಕು ಕಚೇರಿಗೆ ಬಂದಿದ್ದಾರೆ. ಈ ವೇಳೆ ತಹಶೀಲ್ದಾರ್ ಕುಂಞಿ ಅಹಮದ್ ಅವರನ್ನ ಭೇಟಿಯಾಗಿ ತಮ್ಮ ಕಷ್ಟಗಳನ್ನ ಹೇಳಿಕೊಂಡಿದ್ದಾರೆ. ತಕ್ಷಣ ಅವರು ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳನ್ನ ಕರೆಸಿ ವೃದ್ಯಾಪ್ಯ ವೇತನ ಮಂಜೂರು ಮಾಡುವಂತೆ ಆದೇಶ ನೀಡಿದ್ದಾರೆ. ಅಲ್ದೇ, ಅವರಿಗೆ ಆರು ತಿಂಗಳಿಗಾಗುವಷ್ಟು ಔಷಧಿ ಖರ್ಚು ಹಾಗೂ ಮನೆಯ ನಿರ್ವಹಣೆಗೆ ವೈಯಕ್ತಿಕ ಧನ ಸಹಾಯ ಮಾಡಿ ಮನುಷ್ಯ ಪ್ರೀತಿ ತೋರಿಸಿದ್ದಾರೆ.




Leave a Reply

Your email address will not be published. Required fields are marked *

error: Content is protected !!