ಸಾಯುತ್ತಿರುವ ನಕ್ಷತ್ರ ಸ್ಫೋಟದ ಅದ್ಭುತ ಚಿತ್ರ ಹಂಚಿಕೊಂಡ ನಾಸಾ

501

ಪ್ರಜಾಸ್ತ್ರ ಅಂತಾರಾಷ್ಟ್ರೀಯ ಸುದ್ದಿ

ಭೂಮಿಯಿಂದ 2,400 ಜ್ಯೋತಿರ್ವರ್ಷದಷ್ಟು (ಜ್ಯೋತಿರ್ವರ್ಷ ಅಂದ್ರೆ ಒಂದು ವರ್ಷದಲ್ಲಿ ಬೆಳಕು ಚಲಿಸುವ ದೂರವನ್ನ ಜ್ಯೋತಿರ್ವರ್ಷ ಎಂದು ಕರೆಯಲಾಗುತ್ತೆ) ದೂರವಿರುವ ನಕ್ಷತ್ರವೊಂದು ಸ್ಫೋಟಗೊಂಡಾಗ ಎದ್ದ ಅಲೆಯ ಅತ್ಯಂತ ಸುಂದರ ಚಿತ್ರವನ್ನ ನಾಸಾ ಸೆರೆ ಹಿಡಿದಿದೆ. ನಾಸಾದ ಹಬಲ್ ಬಾಹ್ಯಾಕಾಶ ಟೆಲಿಸ್ಕೋಪ್ ತೆಗೆದಿದೆ.

ಸೂಪರ್ ನೋವಾ ನಕ್ಷತ್ರ ಸ್ಫೋಟಗೊಂಡಿರುವ ಚಿತ್ರವನ್ನ ನಾಸಾ ಹಂಚಿಕೊಂಡಿದೆ. ಚಿತ್ರದಲ್ಲಿ ಕಂಡು ಬರುವುದು ಸೂಪರ್ ನೋವಾದ ಹೊರಭಾಗವಾಗಿದೆ. ಅಂತ್ಯಗೊಳ್ಳುತ್ತಿರುವ ನಕ್ಷತ್ರದ 20 ಸಾವಿರ ವರ್ಷದ ಹಿಂದಿನದು ಅಂತಿದೆ. ಹಬಲ್ ಬಾಹ್ಯಾಕಾಶದ ಪಾಲುದಾರವಾಗಿರುವ ಯುರೋಪಿಯನ್ ಸ್ಪೇಸ್ ಏಜೆನ್ಸಿ, ಈ ನಕ್ಷತ್ರ ಸೂರ್ಯನಿಗಿಂತ 20 ಪಟ್ಟು ದೊಡ್ಡದಿರಬಹುದು ಎಂದಿದೆ.

ಉತ್ತರ ನಕ್ಷತ್ರಪುಂಜದಿಂದ ಇದರ ಅಲೆ ಬಂದಿದೆಯಂತೆ. ಇದು ಸ್ಪೋಟಗೊಂಡ ಮೇಲೆ 60 ಜ್ಯೋರ್ತಿವರ್ಷದಷ್ಟು ದೂರದವರೆಗೆ ವಿಸ್ತರಿಸಿದೆ ಎಂದು ಹೇಳಲಾಗ್ತಿದೆ. ಇದು ಸೆಕೆಂಡ್ 217 ಮೈಲು ವೇಗದಲ್ಲಿ ಚಲಿಸುತ್ತದೆ. ಇನ್ನು ಹಬಲ್ ಬಾಹ್ಯಾಕಾಶ ಸಂಸ್ಥೆ 30 ವರ್ಷಗಳಿಂದ ಕೆಲಸ ಮಾಡ್ತಿದೆ.




Leave a Reply

Your email address will not be published. Required fields are marked *

error: Content is protected !!