ಮಂಡ್ಯದಲ್ಲಿ ಅಕ್ರಮ ಮದ್ಯ ಮಾರಾಟ ಜೋರು

417

ಮಂಡ್ಯ: ತಾಲೂಕಿನ ಬಸರಾಳು ಹೋಬಳಿ ವ್ಯಾಪ್ತಿಯಲ್ಲಿ ಅಕ್ರಮ ಮದ್ಯ ಮಾರಾಟ ಜೋರಾಗಿ ನಡೆದಿದೆ. ಬಸರಾಳು ಹೋಬಳಿ ವ್ಯಾಪ್ತಿಯ 4 ಗ್ರಾಮಗಳ  ಕೆಲ ಮನೆಗಳಲ್ಲಿ ಅಕ್ರಮವಾಗಿ ಮದ್ಯ ಮಾರಾಟ ಮಾಡಲಾಗುತ್ತಿದೆ. ಅಲ್ದೇ, ದುಬಾರಿ ಬೆಲೆಗೆ ಮಾರಾಟ ಮಾಡಿ ಲಾಕ್ ಡೌನ್ ನ್ನ ದುರ್ಬಳಕೆ ಮಾಡಿಕೊಳ್ಳಲಾಗ್ತಿದೆ.

ಹನಗನಹಳ್ಳಿ ಬುಂಡಾರ, ಕೊಪ್ಪಲು ಹಟ್ಟಣ, ಹುನಗನಹಳ್ಳಿ ಹಾಗೂ ಮುತ್ತೇಗೆರೆ ಗ್ರಾಮದ ಮನೆಗಳಲ್ಲಿ  ಅಕ್ರಮವಾಗಿ ಮದ್ಯ ಮಾರಾಟ ಮಾಡಲಾಗ್ತಿದೆ. ಒಂದು ಪೆಗ್ ಬಾಟಲ್ ಗೆ 180 ಮತ್ತು 250 ಪಡೆಯುವ ಮೂಲಕ ನಾಲ್ಕು ಪಟ್ಟು ಹೆಚ್ಚು ಹಣ ಸುಲಿಗೆ ಮಾಡುತ್ತಿರುವುದು  ಕಂಡು ಬಂದಿದೆ. ಇಷ್ಟೆಲ್ಲಾ ಅಂದಾ ದರ್ಬಾರ್ ನಡೆಯುತ್ತಿದ್ರೂ ಸಂಬಂಧಪಟ್ಟ ಅಧಿಕಾರಿಗಳು ಕಣ್ಮುಚ್ಚಿಕೊಂಡು ಕುಳ್ತಿರುವುದು ಹಲವು ಅನುಮಾನಗಳಿಗೆ ಕಾರಣವಾಗಿದೆ.




Leave a Reply

Your email address will not be published. Required fields are marked *

error: Content is protected !!