ಕಾಡಿದ ಕರನ್.. ಸರಣಿ ಗೆದ್ದ ಭಾರತ..

258

ಪ್ರಜಾಸ್ತ್ರ ಕ್ರೀಡಾ ಸುದ್ದಿ

ಪುಣೆ: ಭಾರತ ಹಾಗೂ ಇಂಗ್ಲೆಂಡ್ ನಡುವಿನ 3 ಏಕದಿನ ಸರಣಿಯ ಕೊನೆಯ ಪಂದ್ಯದಲ್ಲಿ ಟೀಂ ಇಂಡಿಯಾ ರೋಚಕ ಜಯ ಗಳಿಸಿದೆ. 7 ರನ್ ಗಳ ಅಂತರದಿಂದ ಗೆದ್ದ ಭಾರತ 2-1ರಿಂದ ಸರಣಿ ವಶ ಪಡಿಸಿಕೊಂಡಿತು. ಮೊದಲು ಬ್ಯಾಟ್ ಮಾಡಿದ ಭಾರತ 48.2 ಓವರ್ ಗಳಲ್ಲಿ 10 ವಿಕೆಟ್ ಕಳೆದುಕೊಂಡು 329 ರನ್ ಗಳಿಸಿತ್ತು. ಈ ರನ್ ಚೇಸ್ ಮಾಡಿದ ಜೋಸ್ ಬಟ್ಲರ್ ಪಡೆ 9 ವಿಕೆಟ್ ಕಳೆದುಕೊಂಡು 322 ರನ್ ಗಳಿಸಿ ಸೋಲೊಪ್ಪಿಕೊಂಡಿತು. ಇದರೊಂದಿಗೆ ಭಾರತ ಇಂಗ್ಲೆಂಡ್ ವಿರುದ್ಧ ಟೆಸ್ಟ್, ಟಿ-20 ಹಾಗೂ ಏಕದಿನ ಸರಣಿ ಗೆದ್ದು ಬೀಗಿತು.

330 ರನ್ ಬೆನ್ನು ಹತ್ತಿದ ಇಂಗ್ಲೆಂಡ್ ಪಡೆ ಜಾಸನ್ ರಾಯ್ 14, ಬ್ರಿಸ್ಟೋ 1, ಸ್ಟೋಕ್ಸ್ 35, ಡೆವಿಡ್ ಮಲಾನ್ 50, ಬಟ್ಲರ್ 15, ಲಿವಿಂಗ್ ಸ್ಟೋನ್ 36, ಮೋಯಿನ್ ಅಲಿ 29, ಬೌಲರ್ ಸ್ಯಾಮ್ ಕರನ್(95 ರನ್ ನಾಟೌಟ್) ಭರ್ಜರಿ ಅರ್ಧ ಶತಕ ಸಿಡಿಸಿ ಟೀಂ ಇಂಡಿಯಾವನ್ನು ಕಾಡಿದ. ಒಂದು ರೀತಿಯಲ್ಲಿ ಗೆಲುವನ್ನು ಕಸಿದುಕೊಳ್ಳುವ ಹಂತಕ್ಕೆ ತಂದು ನಿಲ್ಲಿಸಿದ್ದ. ಕರನ್ ಗೆ ಸಾಥ್ ನೀಡಿದ್ದ ಮಾರ್ಕ್ ವುಡ್(14) ರನ್ ಔಟ್ ಆದ. ಟೊಪ್ಲಿ 1 ರನ್ ಗಳಿಸಿದ.

ಭಾರತ ಪರ ಶ್ರಾದೂಲ್ ಠಾಕೂರ್ 4, ಭುವನೇಶ್ವರಕುಮಾರ 3 ವಿಕೆಟ್ ಪಡೆದು ಮಿಂಚಿದರು. ಟಿ.ನಟರಾಜನ್ 1 ವಿಕೆಟ್ ಪಡೆದ.

ಟಾಸ್ ಸೋತು ಮೊದ್ಲು ಬ್ಯಾಟ್ ಮಾಡಿದ ವಿರಾಟ ಕೊಹ್ಲಿ ಪಡೆ ಉತ್ತಮ ಆರಂಭ ಪಡೆಯಿತು. ಆರಂಭಿಕ ಜೋಡಿ ರೋಹಿತ ಶರ್ಮಾ(37) ಹಾಗೂ ಶಿಖರ ಧವನ್(67) 103 ರನ್ ಗಳ ಜೊತೆಯಾಟ ನೀಡಿತು. ಅದೆ ರೀತಿ ಪಂಥ್(78) ಹಾಗೂ ಹಾರ್ದಿಕ ಪಾಂಡೆ(64) ಜೋಡಿ 99 ರನ್ ಗಳ ಜೊತೆಯಾಟವಾಡಿ 300ರ ಗಡಿ ದಾಟುವಂತೆ ಮಾಡಿತು. ಕೊಹ್ಲಿ 7, ರಾಹುಲ 7 ರನ್ ಗಳಿಗೆ ಔಟ್ ಆಗಿ ನಿರಾಸೆ ಮೂಡಿಸಿದರು. ಕೃನಾಲ್ ಪಾಂಡೆ 25, ಶ್ರಾದೂಲ್ ಠಾಕೂರ್ 30, ಭುವನೇಶ್ವರಕುಮಾರ 3, ಪ್ರಸಿದ್ಧ ಕೃಷ್ಣ 0ಗೆ ಔಟ್ ಆದರು. ಅಂತಿಮವಾಗಿ 10 ವಿಕೆಟ್ ಗೆ 329 ರನ್ ಗಳಿಸಿತು.

ಇಂಗ್ಲೆಂಡ್ ಪರ ಮಾರ್ಕ್ ವುಡ್ 3, ಆದಿಲ್ ರಶೀದ್ 2, ಕರನ್, ಟೊಪ್ಲಿ, ಮೊಯಿನ್ ಅಲಿ, ಬೆನ್ ಸ್ಟೋಕ್ಸ್ ಹಾಗೂ ಲಿವಿಂಗ್ ಸ್ಟೋನ್ ತಲಾ 1 ವಿಕೆಟ್ ಪಡೆದರು.


TAG


Leave a Reply

Your email address will not be published. Required fields are marked *

error: Content is protected !!