ಚುಟುಕು ಸರಣಿ ಗೆದ್ದ ಟೀಂ ಇಂಡಿಯಾ

346

ಪ್ರಜಾಸ್ತ್ರ ಕ್ರೀಡಾ ಸುದ್ದಿ

ಇಂಡಿಯಾ ಹಾಗೂ ಇಂಗ್ಲೆಂಡ್ ನಡುವಿನ ಟಿ-20 ಸರಣಿಯನ್ನ ಕೊಹ್ಲಿ ಪಡೆ 3-2 ಅಂತರದಿಂದ ಸರಣಿ ಕೈ ವಶಪಡಿಸಿಕೊಂಡಿದೆ. ವಿರಾಟ ಕೊಹ್ಲಿ, ರೋಹಿತ ಶರ್ಮಾ ಹಾಗೂ ಸೂರ್ಯಕುಮಾರ ಯಾದವ ಭರ್ಜರಿ ಬ್ಯಾಟಿಂಗ್ ಮಾಡಿ 224 ರನ್ ಗಳಿಸಿ ಬಿಗ್ ಟಾರ್ಗೆಟ್ ನೀಡಿತು. ಇದನ್ನು ಮುಟ್ಟುವಲ್ಲಿ ಇಯಾನ್ ಮಾರ್ಗನ್ ಟೀಂ ಸೋಲು ಅನುಭವಿಸಿದೆ.

ವಿರಾಟ ಕೊಹ್ಲಿ 80, ರೋಹಿತ ಶರ್ಮಾ 64, ಸೂರ್ಯಕುಮಾರ ಯಾದವ 32, ಹಾರ್ದಿಕ ಪಾಂಡೆ 39 ರನ್ ಗಳಿಸುವ ಮೂಲಕ 224 ರನ್ ಗಳಿಸಿ 225 ರನ್ ಟಾರ್ಗೆಟ್ ನೀಡಿತು.

ಬಿಗ್ ಸ್ಕೋರ್ ಬೆನ್ನು ಹತ್ತಿದ ಇಂಗ್ಲೆಂಡ್ ಟೀಂಗೆ ಜಾಸನ್ ರಾಯ್ 0 ರನ್ ಗೆ ಔಟ್ ಮಾಡುವ ಮೂಲಕ ಶಾಕ್ ನೀಡಿತು. ಆದ್ರೆ, ಮುಂದೆ ಬಟ್ಲರ್ 52, ಮಲಾನ್ 68 ರನ್‌ ಗಳಿಸಿ ಗೆಲುವಿನತ್ತ ತೆಗೆದುಕೊಂಡು ಹೊರಟಿದ್ರು. ಪಾಂಡೆ ಬಟ್ಲರ್ ವಿಕೆಟ್ ತೆಗೆದು ಬ್ರೆಕ್‌ ಮಾಡಿದ. ಬಳಿಕ‌ ಶಾರ್ದೂಲ ಠಾಕೂರ ಮಲಾನ್ ವಿಕೆಟ್ ಪಡೆದ. ಹೀಗೆ ಮುಂದೆ 16 ರನ್ ಗಳಿಸುವಷ್ಟರಲ್ಲಿ 4 ವಿಕೆಟ್ ಬಿದ್ದವು. ಇದರ ಫಲವಾಗಿ ಮುಂದೆ 20 ಓವರ್ ನಲ್ಲಿ 8 ವಿಕೆಟ್ ಕಳೆದುಕೊಂಡು 188 ರನ್ ಗಳಿಸಿತು. ಹೀಗಾಗಿ ಟೀಂ ಇಂಡಿಯಾ 36 ರನ್‌ ಗಳ ಅಂತರದೊಂದಿಗೆ ಗೆದ್ದು 3-2ರಲ್ಲಿ ಸರಣಿ ತನ್ನದಾಗಿಸಿಕೊಂಡಿತು.

ಕೃಪೆ: ಬಿಬಿಸಿಐ ಟ್ವಿಟರ್ ಪೇಜ್


TAG


Leave a Reply

Your email address will not be published. Required fields are marked *

error: Content is protected !!