133 ವರ್ಷಗಳ ಹಿಂದಿನ ದಾಖಲೆ ಮುರಿದ ಅಶ್ವಿನ್

311

ಪ್ರಜಾಸ್ತ್ರ ಕ್ರೀಡಾ ಸುದ್ದಿ

ಕೋಲ್ಕತ್ತಾ: ಭಾರತ ಹಾಗೂ ಇಂಗ್ಲೆಂಡ್ ನಡುವಿನ ಮೊದಲ ಟೆಸ್ಟ್ ಪಂದ್ಯದ 2ನೇ ಇನ್ನಿಂಗ್ಸ್ ನಲ್ಲಿ ರೂಟ್ ಟೀಂ 178 ರನ್ ಗಳಿಗೆ ಆಲೌಟ್ ಆಗಿದೆ. ಟೀಂ ಇಂಡಿಯಾ ಸ್ಪೀನ್ನರ್ ಅಶ್ವಿನ್ ದಾಳಿಗೆ ನಲುಗಿದ ಆಂಗ್ಲರ ಪಡೆ ಪೆವಲಿಯನ್ ಹಾದಿ ಹಿಡಿಯಿತು. ಹೀಗಾಗಿ 178 ರನ್ ಗಳಿಗೆ ಎಲ್ಲ ವಿಕೆಟ್ ಕಳೆದುಕೊಂಡು 420 ರನ್ ಟಾರ್ಗೆಟ್ ನೀಡಿದೆ.

ಈ ಇನ್ನಿಂಗ್ಸ್ ನಲ್ಲಿ 17.3 ಓವರ್ ಮಾಡಿದ ಅಶ್ವಿನ್ 6 ವಿಕೆಟ್ ಪಡೆದು ಇಂಗ್ಲೆಂಡ್ ತಂಡದ ಬೆನ್ನುಮೂಳೆ ಮುರಿದ್ರು. ಇದರ ಜೊತೆಗೆ 133 ವರ್ಷಗಳ ಹಿಂದಿನ ದಾಖಲೆ ಮುರಿದ್ರು. ಅಂದ್ರೆ ಟೆಸ್ಟ್ ಇನ್ನಿಂಗ್ಸ್ ನಲ್ಲಿ ಸ್ಪೀನ್ ಬೌಲರ್ ವೊಬ್ಬ ಮೊದಲ ಓವರ್ ನ ಮೊದಲ ಎಸೆತದಲ್ಲಿ ವಿಕೆಟ್ ಪಡೆದಿದ್ದು 1888ರ ಬಳಿಕ ಇದೆ ಮೊದಲು.

ಜೋಶಪ್ ಬರ್ನ್ಸ್ ವಿಕೆಟ್ ಪಡೆಯುವುದರೊಂದಿಗೆ ಅಶ್ವಿನ್ ಈ ಸಾಧನೆ ಮಾಡಿದ್ರು. ಇನ್ನು ನದೀಪ 2, ಇಶಾಂತ, ಬೂಮ್ರಾ ತಲಾ 1 ವಿಕೆಟ್ ಪಡೆದ್ರು.

ಇಂಗ್ಲೆಡ್ ಪರ ಕ್ಯಾಪ್ಟನ್ ರೂಟ್ ಬಾರಿಸಿದ 40 ರನ್ ಗರಿಷ್ಟ ಸ್ಟೋರ್ ಆಗಿದೆ. ಬರ್ನ್ಸ್ 0, ಸಿಬ್ಲಿ 16, ಲಾರೆನ್ಸ್ 18, ಸ್ಟ್ರೋಕ್ 7, ಪೋಪ್ 28, ಬಟ್ಲರ್ 24, ಬೆಸ್ 25, ಆರ್ಚರ್ 5, ಆಂಡ್ರಸನ್ 0(ನಾಟೌಟ್) ರನ್ ಆಟವಾಡಿದ್ರು. ಇನ್ನು 39 ರನ್ ಗಳಿಗೆ 1 ವಿಕೆಟ್(ರೋಹಿತ ಶರ್ಮಾ 12 ರನ್) ಕಳೆದುಕೊಂಡಿರುವ ಭಾರತ ಮಂಗಳವಾರ 90 ಓವರ್ ಗಳಲ್ಲಿ 381 ರನ್ ಗಳಿಸಬೇಕು.




Leave a Reply

Your email address will not be published. Required fields are marked *

error: Content is protected !!