365ಕ್ಕೆ ಭಾರತ ಆಲೌಟ್.. ಶತಕ ವಂಚಿತ ವಾಷಿಂಗ್ಟನ್

215

ಪ್ರಜಾಸ್ತ್ರ ಕ್ರೀಡಾ ಸುದ್ದಿ

ಅಹಮದಾಬಾದ್: ಭಾರತ ಹಾಗೂ ಇಂಗ್ಲೆಂಡ್ ನಡುವಿನ 4ನೇ ಟೆಸ್ಟ್ ಪಂದ್ಯದ 3 ದಿನದಾಟದಲ್ಲಿ ಭಾರತ 365ಕ್ಕೆ ಆಲೌಟ್ ಆಗಿದೆ. ಆದ್ರೆ, ನಾಟೌಟ್ ಆಗಿ ಉಳಿದ ವಾಷಿಂಗ್ಟನ್ ಸುಂದರಗೆ ಅದೃಷ್ಟ ಕೈಕೊಟ್ಟಿತು. ಹೀಗಾಗಿ 4 ರನ್ ಗಳಿಂದ ಶತಕ ವಂಚಿತರಾದ್ರು.

ಒಂದ್ಕಡೆ ಸುಂದರ ಗಟ್ಟಿಯಾಗಿ ನಿಂತಿದ್ರೆ ಮತ್ತೊಂದು ಕಡೆಯಿಂದ ವಿಕೆಟ್ ಬೀಳುತ್ತಿದ್ವು. ಹೀಗಾಗಿ 96 ರನ್ ಗಳಿಸಿ ನಾಟೌಟ್ ಆಗಿ ಉಳಿದ್ರು. ಅಶ್ವಿನ್ 13, ಅಕ್ಷರ ಪಟೇಲ 43, ಇಶಾಂತ ಶರ್ಮಾ 0, ಸಿರಾಜ್ 0 ರನ್ ಗೆ ಔಟ್ ಆದ್ರು. ಹೀಗಾಗಿ 365 ರನ್ ಗಳಿಸಿವುದರೊಂದಿಗೆ 160 ಲೀಡ್ ನೀಡಿದ್ರು.

ಇನ್ನು ಮೊದಲ ಇನ್ನಿಂಗ್ಸ್ ನಲ್ಲಿ ಬೆನ್ ಸ್ಟೋಕ್ಸ್ 4, ಆಂಡ್ರಸನ್ 3, ಲೀಚ್ 2 ವಿಕೆಟ್ ಪಡೆದ್ರು. 2ನೇ ಇನ್ನಿಂಗ್ಸ್ ಶುರು ಮಾಡಿರುವ ರೂಟ್ ಪಡೆ 6 ರನ್ ಗಳಿಸಿದೆ.


TAG


Leave a Reply

Your email address will not be published. Required fields are marked *

error: Content is protected !!