ಪ್ರಜಾಸ್ತ್ರ ಕ್ರೀಡಾ ಸುದ್ದಿ
ನವದೆಹಲಿ: ಟೆಸ್ಟ್, ಒನ್ ಡೇ ಸರಣಿಗಳ ಹಿನ್ನೆಲೆ ಸೌಥ್ ಆಫ್ರಿಕಾ ಪ್ರವಾಸ ಹಮ್ಮಿಕೊಂಡಿರುವ ಭಾರತ ಹಾಗೂ ಆಫ್ರಿಕಾ ನಡುವೆ ಇಂದಿನಿಂದ ಮೊದಲ ಟೆಸ್ಟ್ ಪಂದ್ಯ ಶುರುವಾಗಲಿದೆ.
ಇಂದು ಮಧ್ಯಾಹ್ನ 1.30ಕ್ಕೆ ಪಂದ್ಯ ಶುರುವಾಗಲಿದೆ. ಟೀಂ ಇಂಡಿಯಾ ಕ್ಯಾಪ್ಟನ್ ಕೊಹ್ಲಿ ಹಾಗೂ ಆಫ್ರಿಕಾ ಕ್ಯಾಪ್ಟನ್ ಡೀನ್ ಎಲ್ಗರ್ ಬಳಗದ ನಡುವೆ ಕದನ ನಡೆಯಲಿದೆ. ನಾಯಕತ್ವ ವಿಚಾರಕ್ಕೆ ಸಂಬಂಧಿಸಿದಂತೆ ಕೊಹ್ಲಿ ಹಾಗೂ ಬಿಸಿಸಿಐ ಆಡಳಿತ ಮಂಡಳಿ ನಡುವೆ ಬಹಿರಂಗ ಕಚ್ಚಾಟದ ನಂತರ ನಡೆಯುತ್ತಿರುವ ಮೊದಲ ಪಂದ್ಯವಿದು. ಹೀಗಾಗಿ ಸಾಕಷ್ಟು ಕುತೂಹಲ ಮೂಡಿಸಿದೆ.