ನಾಳೆಯಿಂದ ಟೆಸ್ಟ್ ಸರಣಿ ಶುರು

728

ಇಂದೊರ್: ನಾಳೆಯಿಂದ ಇಂಡಿಯಾ ಹಾಗೂ ಬಾಂಗ್ಲಾ ನಡುವೆ ಟೆಸ್ಟ್ ಸರಣಿ ಶುರುವಾಗಲಿದೆ. ಟಿ-20 ಸರಣಿ ಗೆದ್ದು ಖುಷಿಯಲ್ಲಿರುವ ಇಂಡಿಯಾ ಟೆಸ್ಟ್ ಸರಣಿಗೆ ಸಜ್ಜಾಗಿದೆ. ನಂಬರ್ 1 ಟೆಸ್ಟ್ ತಂಡದ ನಾಯಕ ವಿರಾಟ ಕೊಹ್ಲಿ ಟೀಂ ಟೆಸ್ಟ್ ಸರಣಿ ಗೆಲ್ಲಲು ಭರ್ಜರಿಯಾಗಿ ನೆಟ್ ಪ್ರ್ಯಾಕ್ಟೀಸ್ ಮಾಡ್ತಿದೆ.

ಚುಟುಕು ಆಟದಿಂದ ಹೊರಗೆ ಉಳಿದು ಎಂಜಾಯ್ ಮೂಡ್ ನಲ್ಲಿದ್ದ ನಾಯಕ ವಿರಾಟ ಕೊಹ್ಲಿ ಮರಳಿದ್ದಾರೆ. ಹೀಗಾಗಿ ತಂಡಕ್ಕೆ ಮತ್ತಷ್ಟು ಶಕ್ತಿ ಬಂದಿದೆ. ಸೌಥ್ ಆಫ್ರಿಕಾ ವಿರುದ್ಧ ಅಬ್ಬರಿಸಿದ್ದ ರೋಹಿತ ಶರ್ಮಾ, ಕನ್ನಡಿಗ ಮಯಾಂಕ ಅಗರ್ವಾಲ್ ಮತ್ತೊಮ್ಮೆ ತಮ್ಮ ಸಾಮರ್ಥ್ಯ ಸಾಬೀತು ಮಾಡಲು ಸಿದ್ಧರಾಗಿದ್ದಾರೆ. ಇದರ ಜೊತೆಗೆ ಅಜಿಂಕೆ ರಹಾನೆ, ಚೇತೇಶ್ವರ ಪೂಜಾರ, ವೃದ್ಧಿಮಾನ್ ಶಾ, ರವೀಂದ್ರ ಜಡೇಜಾ, ಕುಲದೀಪ ಯಾದವ, ಉಮೇಶ ಯಾದವ, ಇಶಾಂತ ಶರ್ಮಾ ದಾಳಿಗೆ ಸಜ್ಜಾಗಿದ್ದಾರೆ.

ಯಾವಾಗ ಬೇಕಾದ್ರೂ ಟೀಂ ಇಂಡಿಯಾ ಶಾಕ್ ಕೊಡುವಷ್ಟು ಸಾಮರ್ಥ್ಯ ಹೊಂದಿರುವ ಬಾಂಗ್ಲಾ ಟೀಂನಲ್ಲಿ, ಮಹಮುದ್ದುಲ್ಲಾ, ಲಿಟನ್ ದಾಸ, ಇಮ್ರೂಲ್ ಕಯಾಸ್, ಮೊಮಿನೂಲ್ ಹಕ್, ಮುಷ್ತಾಫಿಕ್ಯೂರ್ ರೆಹಮಾನ್, ಮೆಹದಿ ಹಸನ್ ಸೇರಿದಂತೆ ಬಲಿಷ್ಟ ಆಟಗಾರರು ಇದ್ದಾರೆ. 2017ರ ಏಕೈಕ ಟೆಸ್ಟ್ ಪಂದ್ಯದಲ್ಲಿ ಬಾಂಗ್ಲಾ ಸೋತಿದೆ. ಇದೀಗ 2 ಟೆಸ್ಟ್ ಸರಣಿಯಲ್ಲಿ ಗೆಲ್ಲುವ ತವಕದಲ್ಲಿದೆ. ಆಲ್ ರೌಂಡರ್, ಮಾಜಿ ನಾಯಕ ಶಕಿಬ್ ಅಲ್ ಹಸನ್ ಅನುಪಸ್ಥಿತಿ ಬಾಂಗ್ಲಾಗೆ ಒಂದಿಷ್ಟು ಕಾಡಬಹುದು.




Leave a Reply

Your email address will not be published. Required fields are marked *

error: Content is protected !!