ಬಾಂಗ್ಲಾಗೆ 315 ರನ್ ಟಾರ್ಗೆಟ್

346

ಲಂಡನ್: ಎಡ್ಜ್ ಬಾಸ್ಟನ್ ಅಂಗಳದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟ್ ಮಾಡಿದ ಬ್ಲೂ ಬಾಯ್ಸ್ ಭರ್ಜರಿಯಾಗಿ ಆಟವಾಡಿದ್ದಾರೆ. ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡ ಕೊಹ್ಲಿ ಬಳಗ ಉತ್ತಮವಾಗಿ ಆಡಿದೆ. ಆರಂಭಿಕ ಜೋಡಿ ರೋಹಿತ ಶರ್ಮಾ ಹಾಗೂ ಕೆ.ಎಲ್ ರಾಹುಲ ಭರ್ಜರಿಯಾಗಿ 180 ರನ್ ಗಳ ಜೊತೆಯಾಟವಾಡಿದೆ. ಹೀಗಾಗಿ 50 ಓವರ್ ಗಳಲ್ಲಿ 9 ವಿಕೆಟ್ ನಷ್ಟಕ್ಕೆ 314 ರನ್ ಪೇರಿಸಿದೆ.

ರೋಹಿತ ಶರ್ಮಾ 92 ಬೌಲ್ ಗಳಲ್ಲಿ 104 ರನ್ ಬಾರಿಸಿದ್ದಾರೆ. ಇದರಲ್ಲಿ 7 ಫೋರ್ ಹಾಗೂ 5 ಭರ್ಜರಿ ಸಿಕ್ಸ್ ಗಳು ಸೇರಿವೆ. ಇನ್ನು ಕೆ.ಎಲ್ ರಾಹುಲ 92 ಬೌಲ್ ಗಳಲ್ಲಿ 77 ರನ್ ಬಾರಿಸಿದ್ದಾರೆ. ಇದರಲ್ಲಿ 6 ಫೋರ್ ಹಾಗೂ 1 ಸಿಕ್ಸ್ ಇದೆ. 180ಕ್ಕೆ ಮೊದಲ ವಿಕೆಟ್ ಬಿದ್ರೆ ಬಳಿಕ 15 ರನ್ ಗಳಿಸುವಷ್ಟರಲ್ಲಿ 195 ರನ್ ಗಳಿಗೆ 2ನೇ ವಿಕೆಟ್ ಬಿತ್ತು.

ರೋಹಿತ ಹಾಗೂ ರಾಹುಲ ಹೋದ ಬಳಿಕ ಬಂದ ಕ್ಯಾಪ್ಟನ್ ವಿರಾಟ ಕೊಹ್ಲಿ ಹಾಗೂ ಪಂಥ್ ಸಹ ಭರ್ಜರಿಯಾಗಿ ಆಟವಾಡ್ತಿದ್ರು, ಆದ್ರೆ 26 ರನ್ ಬಾರಿಸಿದ್ದ ಕೊಹ್ಲಿ ವಿಕೆಟ್ ಪಡೆದ ಮುಸ್ತಫಿಝರ್ ರೆಹಮಾನ್ ಅದೇ ಓವರ್ ನಲ್ಲಿ ಹಾರ್ದಿಕ ಪಾಂಡೆ ವಿಕೆಟ್ ಪಡೆದು ಭಾರತದ ರನ್ ವೇಗಕ್ಕೆ ಕಡಿವಾಣ ಹಾಕಿದ. ಈ ವೇಳೆ 38.4 ಓವರ್ ಗಳಲ್ಲಿ 4 ವಿಕೆಟ್ ಗೆ 237 ರನ್ ಗಳಿಸಿದ್ರು.

ರಿಶಭ ಪಂಥಗೆ ಧೋನಿ ಜೊತೆಯಾದ್ರು. ಕಳೆದ ಪಂದ್ಯದಲ್ಲಿ ಉತ್ತಮ ಬ್ಯಾಟಿಂಗ್ ಮಾಡಿದ್ದ ರಿಶಭ ಈ ಪಂದ್ಯದಲ್ಲಿಯೂ ಭರ್ಜರಿಯಾಗಿ ಆಡಿದ. ಶೆಫಿವುದ್ದೀನ್ ನ 5ನೇ ಓವರ್ ನಲ್ಲಿ ಹ್ಯಾಟ್ರಿಕ್ ಫೋರ್ ಬಾರಿಸಿದ. 48 ರನ್ ಹೊಡೆದು ಆಡ್ತಿದ್ದ ರಿಶಭ, ಶಕೀಬ್ ಅಲ್ ಹಸನ್ ಬೌಲಿಂಗ್ ನಲ್ಲಿ ಔಟ್ ಆಗುವ ಮೂಲಕ ಅರ್ಧಶತಕ ತಪ್ಪಿಸಿಕೊಂಡ. ಬಳಿಕ ದಿನೇಶ ಕಾರ್ತಿಕ ಧೋನಿ ಜೊತೆಗೂಡಿದ. ಇದು ಈ ಬಾರಿಯ ವರ್ಲ್ಡ್ ಕಪ್ ನಲ್ಲಿ ಮೊದಲ ಪಂದ್ಯವಾಗಿದೆ. ಆದ್ರೆ, ಬೇಡದ ಶಾಟ್ ಹೊಡೆದು ಮುಸ್ತಫಿಝರ್ ರೆಹಮಾನ್ ಗೆ ವಿಕೆಟ್ ಕೊಟ್ಟ.

ಕಳೆದ ಪಂದ್ಯದಲ್ಲಿ ನಿಧಾನವಾಗಿ ಆಡಿದ ಟೀಕೆಗೆ ಗುರಿಯಾಗಿದ್ದ ಮಾಜಿ ನಾಯಕ, ವಿಕೆಟ್ ಕೀಪರ್ ಎಂ.ಎಸ್ ಧೋನಿ, ಈ ಪಂದ್ಯದಲ್ಲಿ ಸ್ವಲ್ಪ ವೇಗವಾಗಿ ಆಡಲು ನೋಡಿದ್ರು. 37 ಬೌಲ್ ಗಳಲ್ಲಿ 35 ರನ್ ಹೊಡೆದು ಔಟ್ ಆದ್ರು. ಇದ್ರಿಂದಾಗಿ 50 ಓವರ್ ಗಳಲ್ಲಿ ಭಾರತ 9 ವಿಕೆಟ್ ನಷ್ಟಕ್ಕೆ 314 ರನ್ ಬಾರಿಸಿ ಬಾಂಗ್ಲಾಗೆ 315 ಟಾರ್ಗೆಟ್ ನೀಡಿದೆ.

ರೋಹಿತ ಹಾಗೂ ರಾಹುಲ ವಿಕೆಟ್ ಬಿದ್ದ ಬಳಿಕ ಭಾರತದ ಬ್ಯಾಟಿಂಗ್ ಪಡೆಯಿಂದ ದೊಡ್ಡ ಜೊತೆಯಾಟ ಬರ್ಲಿಲ್ಲ. ಬಾಂಗ್ಲಾ ಪರ ಮುಸ್ತಫಿಝರ್ 10 ಓವರ್ ಗಳಲ್ಲಿ 59 ರನ್ ಕೊಟ್ಟು 5 ವಿಕೆಟ್ ತೆಗೆದು ಮಿಂಚಿದ. ಶಕೀಬ್ ಅಲ್ ಹಸನ್, ರುಬಿಲ್ ಹಸನ್ ಹಾಗೂ ಸೌಮಾ ಸರ್ಕಾರ್ ತಲಾ ಒಂದು ವಿಕೆಟ್ ಪಡೆದ್ರು.


TAG


Leave a Reply

Your email address will not be published. Required fields are marked *

error: Content is protected !!